ಅಯೋಧ್ಯೆ ಪ್ರಕರಣ ತುರ್ತು ವಿಚಾರಣೆ ವಿಷಯದಲ್ಲಿ ಸ್ವಾಮಿಗೆ ಹಿನ್ನಡೆ – News Mirchi

ಅಯೋಧ್ಯೆ ಪ್ರಕರಣ ತುರ್ತು ವಿಚಾರಣೆ ವಿಷಯದಲ್ಲಿ ಸ್ವಾಮಿಗೆ ಹಿನ್ನಡೆ

ನವದೆಹಲಿ: ಉತ್ತರಪ್ರದೇಶದಲ್ಲಿ ವಿವಾದಿತ ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಬಾಬ್ರಿ ಮಸೀದಿಗೆ ಸಂಬಂಧಿಸಿದ ಪ್ರಕರಣದ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಎಂದು ಬಿಜೆಪಿ ನಾಯಕ ಸುಬ್ರಮಣ್ಯಸ್ವಾಮಿ ದಾಖಲಿಸಿದ್ದ ಪಿಟೀಷನ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸುಬ್ರಮಣ್ಯಸ್ವಾಮಿ ಮನವಿಯನ್ನು ನಿರಾಕರಿಸಿದ್ದು, ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದೆ.

ಅಯೋಧ್ಯೆ ಸ್ಥಳದ ಬಗ್ಗೆ ತಮಗೆ ಯಾವುದೇ ಆಸಕ್ತಿಯಿಲ್ಲ, ಆದರೆ ರಾಮಮಂದಿರ ಶೀಘ್ರದಲ್ಲಿ ನಿರ್ಮಿಸಬೇಕು ಎಂದು ಸುಬ್ರಮಣ್ಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಸುಬ್ರಮಣ್ಯಸ್ವಾಮಿ ಮಧ್ಯಪ್ರವೇಶಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಕಕ್ಷಿದಾರರು ಸಹಾ ಆಕ್ಷೇಪ ವ್ಯಕ್ತಪಡಿಸಿದರು.

ರಾಮಮಂದಿರ ತುಂಬಾ ಸೂಕ್ಷ್ಮ ವಿಷಯ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಮಾರ್ಚ್ 21 ರಂದು ನಡೆದ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಪ್ರಕರಣಕ್ಕೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಎರಡೂ ವರ್ಗಗಳು ಬಯಸಿದರೆ ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

Loading...

Leave a Reply

Your email address will not be published.