ಇಪಿಎಫ್ ಬಡ್ಡಿ ದರದಲ್ಲಿ ಕಡಿತ |News Mirchi

ಇಪಿಎಫ್ ಬಡ್ಡಿ ದರದಲ್ಲಿ ಕಡಿತ

​ಕೋಟ್ಯಾಂತರ ಉದ್ಯೋಗಿಗಳಿಗೆ ಶಾಕ್ ನೀಡಿ 2016-17 ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 8.8 ರಿಂದ 8.65% ಕ್ಕೆ ಇಪಿಎಫ್ಒ ಕಡಿತಗೊಳಿಸಿದೆ. ಬಡ್ಡಿ ಕಡಿತದಿಂದ ಸುಮಾರು ನಾಲ್ಕು ಕೋಟಿ ಜನರ ಮೇಲೆ ಇದರ ಪ್ರಭಾವ ಬೀಳಲಿದೆ.

ಬೆಂಗಳೂರಿನಲ್ಲಿ ನಡೆದ ಇಪಿಎಫ್ಒ ನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್(ಸಿಬಿಟಿ) ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಂಡಿದ್ದಾಗಿ ಐಎನ್‌ಟಿಯುಸಿ ಉಪಾಧ್ಯಕ್ಷ ಅಶೋಕ್ ಸಿಂಗ್ ಹೇಳಿದ್ದಾರೆ.

  • No items.

ಡಿಪಾಸಿಟ್ ಗಳ ಮೇಲೆ 8.65% ಬಡ್ಡಿ ದರವನ್ನು ನಿಗಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವಿರ್ಜೇಶ್ ಉಪಾಧ್ಯಾಯ ಹೇಳಿದ್ದಾರೆ.
ಅಂದಾಜಿನ ಪ್ರಕಾರ 8.8% ರಷ್ಟು ಬಡದಡಿ ದರದ ಪ್ರಕಾರ ಲೆಕ್ಕ ಹಾಕಿದರೆ ಸಂಸ್ಥೆಗೆ ರೂ. 383 ಕೋಟಿ ಕೊರತೆಯುಂಟಾಗಲಿದೆ, ಹೀಗಾಗಿ ಬಡ್ಡಿ ದರದಲ್ಲಿ ಕಡಿತ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

Loading...
loading...
error: Content is protected !!