ಕೆಲ ಸಂದರ್ಭಗಳಲ್ಲಿ ರಾಹುಲ್ ಅರ್ಥಪೂರ್ಣವಾಗಿ ಮಾತನಾಡುತ್ತಾರೆ: ಬಿಜೆಪಿ ನಾಯಕ – News Mirchi

ಕೆಲ ಸಂದರ್ಭಗಳಲ್ಲಿ ರಾಹುಲ್ ಅರ್ಥಪೂರ್ಣವಾಗಿ ಮಾತನಾಡುತ್ತಾರೆ: ಬಿಜೆಪಿ ನಾಯಕ

​ಕೆಲ ಸಂದರ್ಭಗಳಲ್ಲಿ ಪಪ್ಪು(ರಾಹುಲ್ ಗಾಂಧಿ) ಅರ್ಥಪೂರ್ಣ ಮಾತುಗಳನ್ನಾಡುತ್ತಾರೆ. ಪ್ರಧಾನಮಂತ್ರಿಯವರ ಬಗೆಗಿನ ಗೌರವ ಅವರ ಹೃದಯದಲ್ಲಿ ಹಾಗೇ ಉಳಿಯಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ನಾಯಕ ಪ್ರೇಮ್ ಶುಕ್ಲಾ ಹೇಳಿದ್ದಾರೆ.

ನರೇಂದ್ರ ಮೋದಿ ನಮ್ಮ ಪ್ರಧಾನಮಂತ್ರಿ, ಅವರಿಗೆ ಧಿಕ್ಕಾರ ಹೇಳೋದು ಕಾಂಗ್ರೆಸ್ ಸಂಪ್ರದಾಯವಲ್ಲ. ಪ್ರಧಾನಮಂತ್ರಿಯವರೊಂದಿಗೆ ನಮಗೆ ಅಭಿಪ್ರಾಯ ಭೇದಗಳಿವೆ, ಅದನ್ನು ರಾಜಕೀಯವಾಗಿ ವಿರೋಧಿಸೋಣ, ಆದರೆ ಧಿಕ್ಕಾರ ಕೂಗುವುದು ಬೇಡ ಎಂದು ಉತ್ತರ ಪ್ರದೇಶದ ರ‌್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿದ್ದರು. 

ರಾಹುಲ್ ರ ಮಾತುಗಳಿಗೆ ಬಿಜೆಪಿ ಆಶ್ಚರ್ಯ ವ್ಯಕ್ತಪಡಿಸಿದ್ದು, ರಾಹುಲ್ ಮಾತಿಗೆ ಮೇಲಿನಂತೆ ಪ್ರತಿಕ್ರಿಯಿಸಿದೆ. 

Loading...

Leave a Reply

Your email address will not be published.