ಜಯಾ ಸಾವಿನ ಕುರಿತು ಕೋರ್ಟ್‌ಗೂ ಸಂದೇಹ!

​ಜಯಲಲಿತಾ ನಿಧನದ ಕುರಿತು ಸಂದೇಹ ವ್ಯಕ್ತಪಡಿಸಿರುವ ಎಐಎಡಿಎಂಕೆ ಮುಖಂಡ ಪಿಜೆ ಜೋಸೆಫ್ ಕೋರ್ಟ್ ಮೊರೆ ಹೋಗಿದ್ದು, ಜಯಾ ಸಾವಿನ ಕುರಿತು ತನಿಖೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾದೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಸಾರ್ವಜನಿಕ ಹಿತಾಸಕ್ತಿ ಹಾಕಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್.ವೈದ್ಯನಾಥನ್ ಮತ್ತು ನ್ಯಾ. ಪಾರ್ಥೀಬನ್ ಅವರ ರಜಾಕಾಲದ ನ್ಯಾಯಪೀಠ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.
ಜಯಾ ಸಾವಿನ ಕುರಿತ ಅನುಮಾನಗಳನ್ನು ಬಗೆಹರಿಸಲು ಜಯಾ ಮೃತದೇಹವನ್ನು ಹೊರತೆಗೆಯಲು ನಾವ್ಯಾಕೆ ಆದೇಶಿಸಬಾರದು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಅಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದ ಜಯಲಲಿತಾ, ಆಸ್ಪತ್ರೆಯಲ್ಲೇ ಅಧಿಕೃತ ಸಭೆಗಳನ್ನು ನಡೆಸಿದ್ದಾರೆ, ಪೇಪರ್ ಗಳಿಗೆ ಸಗಿ ಮಾಡಿದ್ದಾರೆ, ಆಹಾರ ಸೇವಿಸುತ್ತಿದ್ದು ಸರ್ಕಾರಿ ಆದೇಶಗಳನ್ನು ಅಲ್ಲಿಂದಲೇ ನೀಡುತ್ತಿದ್ದಾರೆ ಎಂದು ಮಾದ್ಯಮಗಳಲ್ಲಿ ಬಂದ ಸುದ್ದಿಗಳನ್ನು ನೆನಪಿಸಿದ ನ್ಯಾಯಪೀಠ, ಹಠಾತ್ತನೆ ಜಯಾ ನಿಧನರಾದ ಕುರಿತ ವಿಷಯಗಳನ್ನು ರಹಸ್ಯವಾಗಿ ಇಟ್ಟಿರುವುದು ನಮಗೂ ಅನುಮಾನ ಮೂಡಿಸುತ್ತೆ ಎಂದು ಹೇಳಿದೆ.