ಟರ್ಕಿಯಲ್ಲಿ ರಷ್ಯಾ ರಾಯಭಾರಿ ಹತ್ಯೆ

ಟರ್ಕಿ: ಟರ್ಕಿಯಲ್ಲಿನ ರಷ್ಯಾ ರಾಯಭಾರಿಯನ್ನು ಬಂಡುಕೋರನೊಬ್ಬ ಗುಂಡಿಟ್ಟು ಕೊಂದ ಘಟನೆ ನಡೆದಿದೆ. ಛಾಯಾಚಿತ್ರ ಪ್ರದರ್ಶನವೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಆಂಡ್ರಿ ಕರ್ಲೋವ್ ಮೇಲೆ ಮನಬಂದಂತೆ ಬಂಡುಕೋರನೊಬ್ಬ ಗುಂಡು ಹಾರಿಸಿದ್ದಾನೆ.

ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ಹಿಂಬದಿಯಿಂದ ಬಂತ ಆ ವ್ಯಕ್ತಿ, ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. 

ಹೀಗಾಗಿ ಆಂಡ್ರೋ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಈ ಘಟನೆಯನ್ನು ಭಯೋತ್ಪಾದಕರ ಕೃತ್ಯವೆಂದು ಭಾವಿಸುತ್ತಿರುವುದಾಗಿ ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.