ಪೂಜಾರಿಗೆ ನಂಜನಗೂಡು ಮತದಾರರ ಮನಸ್ಥಿತಿ ಗೊತ್ತಿಲ್ಲ – News Mirchi

ಪೂಜಾರಿಗೆ ನಂಜನಗೂಡು ಮತದಾರರ ಮನಸ್ಥಿತಿ ಗೊತ್ತಿಲ್ಲ

​ಜನಾರ್ಧನ ಪೂಜಾರಿ ಅವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರ ಮತದಾರರ ನಾಡಿಮಿಡಿತ ಗೊತ್ತಿಲ್ಲ. ಪೂಜಾರಿ ಅವರ ಮಾತುಗಳನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.

ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಬುಧವಾರ ರಾಜ್ಯಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತ ಎಂದು ಹೇಳಿದ್ದರು.

ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಟ್ಟ ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಶ್ರೀನಿವಾಸ್ ಪ್ರಸಾದ್, ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದರು. ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಸಾದ್ ಸ್ಪರ್ಧಿಸಲಿದ್ದಾರೆ.

Loading...

Leave a Reply

Your email address will not be published.