ಬೆಂಗಳೂರು: ಕುರ್ಚಿ ಕಾರ್ಖಾನೆಯಲ್ಲಿ ಬೆಂಕಿ, ಇಬ್ಬರು ಕಾರ್ಮಿಕರ ಸಾವು

ನಗರದ ಹಳೇಗುಡ್ಡದಹಳ್ಳಿಯ ಕುರ್ಚಿ ಕಾರ್ಖಾನೆಯೊಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನವಾದ ಘಟನೆ ನಡೆದಿದೆ. ಇಬ್ರಾಹಿಂ ಎಂಬುವವರಿಗೆ ಸೇರಿದ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವನ್ನಪ್ಪಿರುವ ಕಾರ್ಮಿಕರು ಬಿಹಾರ ಮೂಲದವರು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಶಳ ಸಿಬ್ಬಂದಿ ಕಟ್ಟಡ ಪೂರ್ತಿ ಅವರಿಸಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.