ಬ್ಯಾಂಕ್ ಅಧಿಕಾರಿಗಳ ಮೇಲೆ ಹಲ್ಲೆ |News Mirchi

ಬ್ಯಾಂಕ್ ಅಧಿಕಾರಿಗಳ ಮೇಲೆ ಹಲ್ಲೆ

ಅಲಹಾಬಾದ್: ಬ್ಯಾಂಕು ಅಧಿಕಾರಿಗಳ ಮೇಲೆ ಜನ ರಸ್ತೆಯಲ್ಲಿಯೇ ಹಲ್ಲೆ ನಡೆಸಿದ ಘಟನೆ ಅಲಹಾಬಾದಿನಲ್ಲಿ ನಡೆದಿದೆ. ಹಣ ನೀಡದೆ ಪದೇ ಪದೇ ಬ್ಯಾಂಕಿಗೆ ಅಲೆಸಿದರು ಎಂದ ಆಕ್ರೋಶಗೊಂಡ ಜನ ಇಬ್ಬರು ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳ ಮೇಲೆ ನಡು ರಸ್ತೆಯಲ್ಲಿಯೇ ಹಲ್ಲೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳು ಮತ್ತು ಜನರ ನಡುವೆ ನಡೆದ ವಾದ ವಿವಾದದ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹಳೆಯ ನೋಟುಗಳು ರದ್ದಾದ ದಿನದಿಂದ ಜನ ಬ್ಯಾಂಕುಗಳ ಎದುರು ಸಾಲುಗಟದಟಿ ನಿಲ್ಲುತ್ತಿದ್ದಾರೆ. ತಮ್ಮ ಸರದಿ ಬರುವ ಸಮಯಕ್ಕೆ ಹಣ ಮುಗಿದಿದೆ, ಮತ್ತೊಂದು ದಿನ ಬನ್ನಿ ಎಂಬ ಬ್ಯಾಂಕ್ ಅಧಿಕಾರಿಗಳ ಮಾತುಗಳಿಗೆ ಆಕ್ರೋಶಗೊಂಡ ಜನ ಬ್ಯಾಂಕ್ ಅಧಿಕಾರಿಗಳ ಮೇಲೆ ಜಗಳಿಯುತ್ತಿದ್ದಾರೆ.

ಇತ್ತೀಚೆಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಲ್ಡಾದ ಶಾಖೆಯನ್ನು ಜನ ಧ್ವಂಸಗೊಳಿಸಿದ್ದರು. ಅಲ್ಲಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಜನ ಪ್ರತಿಭಟನೆಗೂ ಇಳಿಯುತ್ತಿದ್ದಾರೆ.

Loading...
loading...
error: Content is protected !!