ಮುಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಖೇಹರ್

ನವದೆಹಲಿ: ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಜೆ.ಎಸ್.ಖೇಹರ್ ನೇಮಕವಾಗಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಸ್ಟೀಸ್ ಖೇಹರ್ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ.

ಸದ್ಯ ಇರುವ ನ್ಯಾಯಮೂರ್ತಿ ಜಸ್ಟೀಸ್ ಟಿ.ಎಸ್.ಠಾಕೂರ್ ಮುಂದಿನ ವರ್ಷ ಜನವರಿ 3 ರಂದು ನಿವೃತ್ತರಾಗಲಿದ್ದಾರೆ. 64 ವರ್ಷದ ಖೇಹರ್, ಸಿಖ್ ಧರ್ಮದಿಂದ ಮುಖ್ಯ ನ್ಯಾಯಮೂರ್ತಿಯಾಗಲಿರುವ ಪ್ರಥಮ ವ್ಯಕ್ತಿಯಾಗಲಿದ್ದಾರೆ. ಆಗಸ್ಟ್ 7, 2017 ರವರೆಗೆ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ, ಎನ್.ಜೆ.ಎ.ಸಿ ಕಾಯ್ದೆ, ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠಗಳಲ್ಲಿ ಖೇಹರ್ ಕೂಡಾ ಒಬ್ಬರು.

ಸದ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೆ.ಎಸ್.ಖೇಹರ್, ಈ ಹಿಂದೆ ಕರ್ನಾಟಕ, ಉತ್ತರಖಂಡ ಹೈಕೋರ್ಟ್ ಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದರು.

Related News

Loading...

Leave a Reply

Your email address will not be published.

error: Content is protected !!