ಮೋದಿ ಬಟ್ಟೆ ಬದಲಿಸಿದಂತಿವೆ ರಿಸರ್ವ್ ಬ್ಯಾಂಕ್ ನಿಯಮಗಳು: ರಾಹುಲ್  – News Mirchi

ಮೋದಿ ಬಟ್ಟೆ ಬದಲಿಸಿದಂತಿವೆ ರಿಸರ್ವ್ ಬ್ಯಾಂಕ್ ನಿಯಮಗಳು: ರಾಹುಲ್ 

​ನೋಟು ರದ್ದು ಕ್ರಮದ ವಿರುದ್ಧ ಟೀಕೆಗಳನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ಬಟ್ಟೆ ಬದಲಿಸಿದಂತೆ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಬದಲಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಹೊಸ ನಿಯಮ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಡಿಸೆಂಬರ್ 31 ರವರೆಗೆ ದಿನವೊಂದಕ್ಕೆ 5 ಸಾವಿರದವರೆಗಿನ ಮೊತ್ತದ ಹಳೆಯ 500, 1000 ನೋಟುಗಳನ್ನು ಡಿಪಾಸಿಟ್ ಮಾಡಬಹುದು ಮತ್ತು ಇಷ್ಟು ತಡವಾಗಿ ಡಿಪಾಸಿಟ್ ಮಾಡುತ್ತಿರುವುದಕ್ಕೆ ಸಕಾರಣವನ್ನು ನೀಡಬೇಕು. 5 ಸಾವಿರಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಹಳೆಯ ನೋಟುಗಳನ್ನು ಖಾತೆಗೆ ಹಾಕಬೇಕಾದರೆ ಕೇವಲ ಒಮ್ಮೆ ಮಾತ್ರ ಅವಕಾಶವಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು.

Loading...

Leave a Reply

Your email address will not be published.