ಸುಷ್ಮಾ ಸ್ವರಾಜ್ ಗೆ ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ

ಕಿಡ್ನಿ ವೈಫಲ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ನಲ್ಲಿ ಅನುಭವಿ ವೈದ್ಯರುಗಳು ಶಸ್ತ್ರಚಿಕಿತ್ಸೆಯನ್ನು ನಡೆಸಿದರು.

ಕಿಡ್ನಿ ವೈಫಲ್ಯದಿಂದಾಗಿ ಸುಷ್ಮಾ ಸ್ವರಾಜ್ ನವೆಂಬರ್ 7 ಆಸ್ಪತ್ರೆಗೆ ದಾಖಲಾಗಿದ್ದರು. ಸಚಿವೆಗೆ ಮಧುಮೇಹ ಕೂಡಾ ಇದ್ದ ಕಾರಣ ಶಸ್ತ್ರಚಿಕಿತ್ಸೆ ಸ್ವಲ್ಪ ಕಷ್ಟಕರವೂ ಆಗಿತ್ತು. ಏಮ್ಸ್ ನಿರ್ದೇಶಕ ಎಂ.ಸಿ.ಮಿಶ್ರಾ, ವಿಕೆ ಬನ್ಸಾಲ್ ಮತ್ತು ಸಂದೀಪ್ ಮುಂತಾದ ವೈದ್ಯರ ತಂಡ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.