ನೋಟು ರದ್ದು ಪರಿಣಾಮ, ಈ ಬಾರಿ ಕಾಶ್ಮೀರದಲ್ಲಿ ಉಗ್ರರಿಗೆ ಸಿಗಲಿಲ್ಲ ಬೆಂಬಲ

ಕಾಶ್ಮೀರದಲ್ಲಿ ಮತ್ತೊಮ್ಮೆ ಶಾಂತಿ ಕದಡುವ ಉಗ್ರರ ಪ್ರಯತ್ನ ನೋಟು ರದ್ದು ಕ್ರಮದಿಂದಾಗಿ ವಿಫಲಗೊಂಡಿದೆ. ಕಾಶ್ಮೀರ ಕಣಿವೆಯಲ್ಲಿ ಮತ್ತೊಮ್ಮೆ ಶಾಂತಿ ಕದಡಲು ಪಾಕಿಸ್ತಾನದಿಂದ ಬಂದಿದ್ದರು ಮೂವರು ಉಗ್ರರು. ಆದರೆ ನೋಟು ರದ್ದು ಕ್ರಮದ ಹಿನ್ನೆಲೆಯಲ್ಲಿ ರಸ್ತೆಗಿಳಿದು ಕಲ್ಲುಹೊಡೆಯಲು ಸ್ಥಳೀಯರಿಂದ ಈ ಬಾರಿ ಬೆಂಬಲ ವ್ಯಕ್ತವಾಗಿಲ್ಲ. ಇದರ ಜೊತೆಗೆ ಸಶಸ್ತ್ರ ಪಡೆಗಳ ತ್ವರಿತ ಕ್ರಮದಿಂದಾಗಿ ಪಾಕ್ ಉಗ್ರರ ಪ್ರಯತ್ನ ವಿಫಲವಾಗಿದೆ.

ಅಮೀನ್ ಧಾರ್, ವಾಸೀಮ್ ಮಟ್ಟೂ ಮತ್ತು ಅಹಮದ್ ಝರ್ಗಾರ್ ಎಂಬ ಮೂವರು ಲಷ್ಕರೆ ತಯ್ಬಾ ಉಗ್ರರು ಕಾಶ್ಮೀರ ಕಣಿವೆ ಪ್ರವೇಶಿಸಿದ್ದರು ಉಗ್ರರು. ಆದರೆ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಮತ್ತೆ ಅಶಾಂತಿ ಸೃಷ್ಟಿಸುವ ಅವರ ಪ್ರಯತ್ನಕ್ಕೆ ಈ ಹಿಂದೆ ರಸ್ತೆಗಿಳಿದು ಕಲ್ಲು ಹೊಡೆದ ಸ್ಥಳೀಯರಿಂದ ಸರಿಯಾದ ಬೆಂಬಲ ಸಿಗಲಿಲ್ಲ‌.

ನೋಟು ರದ್ದುಗೊಂಡ ನಂತರ ಗಲಭೆಗಳಲ್ಲಿ ಪಾಲ್ಗೊಳ್ಳುವವರಿಗೆ ನೀಡಲು ಹಣದ ಕೊರತೆ ಉಂಟಾಗಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯಾವಾಗ ಸ್ಥಳೀಯರ ಬೆಂಬಲ ಸಿಗದಾಯಿತೋ, ಆಗ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಲು ಸುಲಭವಾಯಿತು ಎನ್ನಲಾಗಿದೆ.

Related News

Loading...

Leave a Reply

Your email address will not be published.

error: Content is protected !!