ಪ್ರೇಮಕುಮಾರ್ ಧುಮಾಲ್ ಮುಖ್ಯಮಂತ್ರಿ ಅಭ್ಯರ್ಥಿ : ಅಮಿತ್ ಷಾ ಘೋಷಣೆ – News Mirchi

ಪ್ರೇಮಕುಮಾರ್ ಧುಮಾಲ್ ಮುಖ್ಯಮಂತ್ರಿ ಅಭ್ಯರ್ಥಿ : ಅಮಿತ್ ಷಾ ಘೋಷಣೆ

ಸೋಲನ್ :  ಪ್ರೇಮಕುಮಾರ್ ಧುಮಾಲ್ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ. ಪ್ರೇಮಕುಮಾರ್ ಧುಮಾಲ್  ಹಿಮಾಚಲ ಪ್ರದೇಶದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು.

ವೀರಭದ್ರ ಸಿಂಗ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಲು 73ವರ್ಷದ ಧುಮಾಲ್ ಅವರೇ ಸೂಕ್ತ ಅಭ್ಯರ್ಥಿ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದ್ದು, ಧುಮಾಲ್ ಕುಮಾರ್ ಅವರೇ ಸೂಕ್ತ ಎಂಬಂತಿದೆ.  ನವೆಂಬರ್ 9ರಂದು ಮತದಾನ ನಡೆಯಲಿದೆ.

ಚುನಾವಣೆಯಲ್ಲಿ ಧುಮಾಲ್ ನೇತೃತ್ವ ವಹಿಸಲಿದ್ದು, ಧುಮಾಲ್ ಡಿಸೆಂಬರ್ 18ರ ನಂತರ ಹಿಮಾಚಲದ ಮುಖ್ಯಮಂತ್ರಿ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಘೋಷಿಸಿದ್ದಾರೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

 

Get Latest updates on WhatsApp. Send ‘Add Me’ to 8550851559

Loading...