‘ನಾನು ಹುಟ್ಟು ಕನ್ನಡ ಪ್ರೇಮಿ’ ಆಕಾಶವಾಣಿ ಮನದಾಳದ ಮಾತಿನಲ್ಲಿ ಸಿಎಂ – News Mirchi

‘ನಾನು ಹುಟ್ಟು ಕನ್ನಡ ಪ್ರೇಮಿ’ ಆಕಾಶವಾಣಿ ಮನದಾಳದ ಮಾತಿನಲ್ಲಿ ಸಿಎಂ

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ರಾಜಕ್ಯೋತ್ಸವದ ಅಂಗವಾಗಿ ಆಕಾಶವಾಣಿ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು.

ನಾನು ಹುಟ್ಟು ಕನ್ನಡ ಪ್ರೇಮಿ, ಕನ್ನಡ ಎಂಬುದು ನನಗೆ ರಾಜಕೀಯವಲ್ಲ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ಕನ್ನಡ ನಾಡು ನುಡಿಯ ಬಗ್ಗೆ ರಾಜಿ ಮಾಡಿಕೊಂಡಿಲ್ಲ. ಭಾಷೆ, ನೆಲ ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ ಎಂದರು. ಜಗತ್ತಿನ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವೂ ಒಂದು, ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ ಎಂದು ಹೇಳಿದರು.

ಕನ್ನಡದ ಜನ,ನೆಲ,ಜಲ,ಬದುಕು, ಸಾಹಿತ್ಯ, ಸಂಸ್ಕೃತಿ ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿಸಿರುವುದೇ ಕನ್ನಡತನ. ಕನ್ನಡ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರೆಂದು ಗುರುತಿಸಿಕೊಂಡಿದ್ದೇವೆ. ಇದು ಕನ್ನಡ ರಾಜ್ಯದ ಕನ್ನಡಿಗರ ಉತ್ಸವ ಎಂದರು.

 

 

 

Get Latest updates on WhatsApp. Send ‘Add Me’ to 8550851559

Loading...