ಶಾಸಕ ಚಿಕ್ಕ ಮಾದು ಇನ್ನಿಲ್ಲ – News Mirchi

ಶಾಸಕ ಚಿಕ್ಕ ಮಾದು ಇನ್ನಿಲ್ಲ

ಮೈಸೂರು, ನ.1 :- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಾಸಕ ಚಿಕ್ಕ ಮಾದು ಇಹಲೋಕ ತ್ಯಜಿಸಿದ್ದಾರೆ.

ಕೆ.ಆರ್.ನಗರದ ತಾಲೂಕು ಹೊಸೂರು ಕಲ್ಲಳ್ಳಿ ಗ್ರಾಮದ ಶಾಸಕ ಚಿಕ್ಕಮಾದು ಅವರಿಗೆ (68)ವರ್ಷ ವಯಸ್ಸಾಗಿತ್ತು. ಕಳೆದ ಮಧ್ಯರಾತ್ರಿ ಸರಿಸುಮಾರು 2ಗಂಟೆಯ ವೇಳೆ ವಿಧಿವಶರಾಗಿದ್ದಾರೆ. ಇವರು ಹಿರಿಯ ಪತ್ನಿ ಜಯಮ್ಮ, ಕಿರಿಯ ಪತ್ನಿ ನಾಗಮ್ಮ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂದರ್ಭ ಮಾತನಾಡಿದ ಸಿಎಂ  ಚಿಕ್ಕಮಾದು ಸರಳ ಸಜ್ಜನಿಕೆಯ ವ್ಯಕ್ತಿ. ಎಲ್ಲರ ಜೊತೆಯಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದರು. ನಾನು ಅವರ ಜೊತೆ ಹೆಚ್ಚು ಒಡನಾಟ ಹೊಂದಿರಲಿಲ್ಲ. ಅವರ ಮನೆಯವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.  ಸಚಿವರು ಹಾಗೂ ಶಾಸಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

 

 

 

Get Latest updates on WhatsApp. Send ‘Add Me’ to 8550851559

Loading...