ಲಿಂಗಾಯತ ಧರ್ಮದ ಹೋರಾಟ ರಾಜಕೀಯ ಪ್ರೇರಿತವಲ್ಲ : ಎಂ.ಬಿ.ಪಾಟೀಲ್ – News Mirchi

ಲಿಂಗಾಯತ ಧರ್ಮದ ಹೋರಾಟ ರಾಜಕೀಯ ಪ್ರೇರಿತವಲ್ಲ : ಎಂ.ಬಿ.ಪಾಟೀಲ್

ಹುಬ್ಬಳ್ಳಿ :  ಲಿಂಗಾಯತ ಧರ್ಮದ ಹೋರಾಟ ರಾಜಕೀಯ ಪ್ರೇರಿತವಲ್ಲ ಎಂದು ಸಚಿವ  ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ  ಸಂವಿಧಾನಾತ್ಮಕ ಮಾನ್ಯತೆ ಸಿಗಬೇಕು. ಮಾನ್ಯತೆ ಸಿಗುವವರೆಗೆ ಹೋರಾಟ ಮಾಡುತ್ತೇವೆ ಎಂದರು. ಹುಬ್ಬಳ್ಳಿಯಲ್ಲಿ ನವೆಂಬರ್ 5ರಂದು ಬೃಹತ್ ಲಿಂಗಾಯತ ಸಮಾವೇಶ  ನಡೆಯಲಿದ್ದು, ರ್ಯಾಲಿಯಲ್ಲಿ  5 ಲಕ್ಷ ಜನ ಸೇರಲಿದ್ದಾರೆ. ಮುಖ್ಯಮಂತ್ರಿಗಳಿಗೆ ಮೆರಿಟ್ ಆಧಾರದ ‌ಮೇಲೆ ನಿರ್ಧಾರ ಮಾಡಿ ಎಂದು ಹೇಳಿದ್ದೇವೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಲಿಂಗಾಯತ ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ. ಲಿಂಗಾಯತ ಧರ್ಮದ ಹೋರಾಟ ರಾಜಕೀಯ ಪ್ರೇರಿತವಲ್ಲ. ಅನೇಕ ಬಿಜೆಪಿ ಮುಖಂಡರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಿದೆ. ಆದರೆ ಪಕ್ಷದ ‌ಒತ್ತಡಕ್ಕೆ ಮಣಿದು ಲಿಂಗಾಯತ ರ್ಯಾಲಿಗೆ ಬರುತ್ತಿಲ್ಲ. ಬಿಜೆಪಿ ಮುಖಂಡರು ಬಂದರೆ ಅವರಿಗೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಖಂಡತ್ವ ಕೊಡುತ್ತೇವೆ ಎಂದಿದ್ದಾರೆ.

 

 

 

Get Latest updates on WhatsApp. Send ‘Add Me’ to 8550851559

Loading...