ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಲೂಸ್ ಮಾದ – News Mirchi

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಲೂಸ್ ಮಾದ

ಬೆಂಗಳೂರು :  ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗೇಶ್ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ವರಿಸಿದ್ದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್ ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ನಟ ಯೋಗಿ ಸಾಹಿತ್ಯ ಅವರಿಗೆ ಮಾಂಗಲ್ಯಧಾರಣೆ ಮಾಡಿದರು.  ಯೋಗಿ ಮದುವೆ ಸಂಪ್ರದಾಯಬದ್ಧವಾಗಿ ನೆರವೇರಿತು. ಮದುವೆ ಸಂದರ್ಭದಲ್ಲಿ ಸಾಹಿತ್ಯ ಮತ್ತು ಯೋಗಿ ಕುಟುಂಬದವರು ಮತ್ತು ಬಂಧು ಮಿತ್ರರಷ್ಟೇ ಉಪಸ್ಥಿತರಿದ್ದರು. ಮದುವೆಗೆ ಚಿತ್ರರಂಗದ ಖ್ಯಾತನಾಮರು ಆಗಮಿಸಿದ್ದರು. ಹಿರಿಯ ನಟ ಶಿವರಾಜ್ ಕುಮಾರ್ ಆಗಮಿಸಿ  ನವದಂಪತಿಗಳಿಗೆ ಶುಭ ಹಾರೈಸಿದರು

ಐಟಿ ಉದ್ಯೋಗಿಯಾಗಿರುವ ಸಾಹಿತ್ಯ, ನಟ ಯೋಗಿ ಅವರ ಬಾಲ್ಯದ ಗೆಳತಿಯಾಗಿದ್ದಾರೆ. ಸಾಹಿತ್ಯ ಅವರನ್ನು ಯೋಗಿ ಮೊದಲಿನಿಂದಲೂ ಪ್ರೀತಿಸುತ್ತಿದ್ದರು. ಸಾಹಿತ್ಯ ಅವರೂ ಕೂಡ ಯೋಗಿಯನ್ನು ಪ್ರೀತಿಸುತ್ತಿದ್ದರು. ಪೋಷಕರಿಗೆ  ವಿಚಾರ ತಿಳಿಯುತ್ತಿದ್ದಂತೆ  ಕಳೆದ ಜೂನ್ 11ರಂದು ವಿವಾಹ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.

 

 

 

Get Latest updates on WhatsApp. Send ‘Add Me’ to 8550851559

Loading...