ನಾಪತ್ತೆಯಾಗಿದ್ದ ಮಕ್ಕಳೀಗ ಪೋಷಕರ ಮಡಿಲಲ್ಲಿ – News Mirchi

ನಾಪತ್ತೆಯಾಗಿದ್ದ ಮಕ್ಕಳೀಗ ಪೋಷಕರ ಮಡಿಲಲ್ಲಿ

ಬೆಂಗಳೂರು :  ಆಟವಾಡುತ್ತಿದ್ದ ವೇಳೆ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು. ಆ ಮಕ್ಕಳು ತಿರುಪತಿಯಲ್ಲಿ ಪತ್ತೆಯಾಗಿದ್ದು ಅವರನ್ನು ಪೊಲೀಸರು ಸುರಕ್ಷಿತವಾಗಿ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

ಸಂಜಯನಗರದ ಭೂಪಸಂದ್ರ ಮುಖ್ಯರಸ್ತೆಯ ಬಳಿ ಆಟವಾಡುತ್ತಿದ್ದ ವೇಳೆ ನಮ್ರತಾ (7), ನಮಿತ್ (5)ನಾಪತ್ತೆಯಾಗಿದ್ದರು. ಮಾನಸಿಕ ಅಸ್ವಸ್ಥ  ವಿನೋದ್ ಎಂಬಾತ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ. ಮಕ್ಕಳನ್ನು ಅವರ ಮಾವನ ಸ್ನೇಹದ ಮೇಲೆ ಆಗಾಗ ಪರಿಚಯ ಮಾಡಿಕೊಂಡು ಮಕ್ಕಳಿಗೆ ಸಿಹಿ ತಿಂಡಿ ಕೊಡಿಸುತ್ತಿದ್ದ. ಅದೇ ಪರಿಚಯದ ಮೇಲೆ ಮಕ್ಕಳನ್ನು ಆಟವಾಡುತ್ತಿದ್ದ ವೇಳೆ ಅಪಹರಿಸಿ ಪರಾರಿಯಾಗಿದ್ದ. ಮಕ್ಕಳು ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು, ಪೊಲೀಸರು ಸಿಸಿ ಕ್ಯಾಮರಾ  ಪರಿಶೀಲಿಸಿದಾಗ ವಿನೋದ್ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಮಕ್ಕಳ ಫೋಟೋವನ್ನು ವಾಟ್ಸ್ ಆ್ಯಪ್ ಗಳ ಮೂಲಕ ಹರಿಬಿಡಲಾಯಿತು. ಮಕ್ಕಳ ತಂದೆ ಪ್ರಶಾಂತ್ ಪರಿಚಯಸ್ಥ ಅವಿನಾಶ್ ಪರಿಚಯದವರು ಕರೆ ಮಾಡಿ ಮಕ್ಕಳನ್ನು ತಿರುಪತಿಯಲ್ಲಿ ನೋಡಿರುವುದಾಗಿ ತಿಳಿಸಿದರು. ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಮಕ್ಕಳನ್ನು ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.

 

 

 

Get Latest updates on WhatsApp. Send ‘Add Me’ to 8550851559

Loading...