ನನಗೂ ಸಿಎಂ ಆಗುವ ಆಸೆ ಇದೆ ಮನದಿಂಗಿತ ವ್ಯಕ್ತಪಡಿಸಿದ ಎಂ.ಬಿ.ಪಾಟೀಲ್ – News Mirchi

ನನಗೂ ಸಿಎಂ ಆಗುವ ಆಸೆ ಇದೆ ಮನದಿಂಗಿತ ವ್ಯಕ್ತಪಡಿಸಿದ ಎಂ.ಬಿ.ಪಾಟೀಲ್

ವಿಜಯಪುರ:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದ್ದು ನನಗೂ ಸಿಎಂ ಆಗುವ ಆಸೆ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೂ ಸಿಎಂ ಆಗುವ ಆಸೆ ಇದೆ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯ ನಂತರದ ಪಾಳಿ ನನ್ನದಾಗಲಿದೆ ಎಂದು ಹೇಳಿದರು.

ಇಲ್ಲಿನ ಪ್ರಸಿದ್ಧ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರ ಎಂದೇ ಪ್ರಸಿದ್ಧಿ ಪಡೆದ ಸೋಮದೇವರ ಹಟ್ಟಿಯಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ  ಸಿಎಂ ಆಗುವಂತೆ ಪ್ರಾರ್ಥಿಸಿದ್ದೀರಿ ಈಗಾಗಲೇ ಮುಂದಿನ ಸಿಎಂ ನೀವೇ ಎಂಬ ಮಾತು ಹರಿದಾಡುತ್ತಿದೆ ಎಂದಾಗ ಪ್ರತಿಕ್ರಿಯಿಸಿದ ಅವರು  ಸದ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಎಲ್ಲರೂ ಸೇರಿ ರಾಜ್ಯದ ಜನತೆಯ ಮುಂದೆ ಹೋಗುತ್ತೇವೆ. ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಆಗಲಿದ್ದಾರೆ. ಮುಂದೊಂದು ದಿನ ನನಗೂ ಅವಕಾಶ ಬರಲಿದೆ ಎಂದಿದ್ದಾರೆ.

 

 

 

 

 

Get Latest updates on WhatsApp. Send ‘Add Me’ to 8550851559

Loading...