ರಾಜಸ್ಥಾನದ ನಾಗೋರ್ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಹುಡುಗಿ  ಪತ್ತೆ – News Mirchi

ರಾಜಸ್ಥಾನದ ನಾಗೋರ್ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಹುಡುಗಿ  ಪತ್ತೆ

ಬೆಂಗಳೂರು :  ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ  ರಾಜಸ್ಥಾನದ ನಾಗೋರ್ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ  17  ವರ್ಷದ  ಹುಡುಗಿ  ಪತ್ತೆಯಾಗಿದ್ದಾಳೆ.

ರಾಜ್ಯದ ಎಲ್ಲ ನಿಲ್ದಾಣಗಳಲ್ಲೂ ರೈಲ್ವೆ ಸಿಬ್ಬಂದಿ ಪೋಷಕರಿಂದ ತಪ್ಪಿಸಿಕೊಂಡು ಅಪಾಯಕ್ಕೆ ಸಿಲುಕಿರುವ ಮಕ್ಕಳ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೈಲ್ವೆ ಭದ್ರತಾ ಪಡೆ ಎಸ್ಪಿ ದೇಬಶ್ಮಿತ ಚಟ್ಟೋಪಾಧ್ಯಾಯ ವಾರದಿಂದೀಚೆಗೆ ನಗರ ರೈಲು ನಿಲ್ದಾಣದಲ್ಲಿ ರಾಜಸ್ಥಾನದ ಹುಡುಗಿ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ಇಬ್ಬರು ಬಾಲಕರನ್ನು ರಕ್ಷಣೆ ಮಾಡಿ ಅವರ ಪೋಷಕರಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಿಲ್ದಾಣದಲ್ಲಿ ಅಸಹಾಯಕಳಾಗಿ ನಿಂತಿದ್ದ ಹುಡುಗಿಯೋರ್ವಳನ್ನು ವಿಚಾರಿಸಿದಾಗ, ನಾನು ರಾಜಸ್ಥಾನದವಳು. ತಾಯಿಗೆ ಔಷಧ ತರಲೆಂದು ಮೆಡಿಕಲ್ ಶಾಪ್‌ಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಕುಡಿಯಲು ತಂಪು ಪಾನೀಯ ಕೊಟ್ಟ. ಅದನ್ನು ಕುಡಿಯುತ್ತಿದ್ದಂತೆಯೇ ನಿತ್ರಾಣಳಾದೆ. ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಎಚ್ಚರಗೊಂಡಾಗ ರೈಲಿನ ಶೌಚಾಲಯದಲ್ಲಿದ್ದೆ. ದಿಕ್ಕು ತೋಚದಂತಾಗಿ ಬೆಂಗಳೂರಿಗೆ ಬಂದುಬಿಟ್ಟೆ  ಎಂದಿದ್ದಾಳೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.

ಮಗಳು ನಾಪತ್ತೆಯಾದ ದಿನವೇ ತಾಯಿ ಸ್ಥಳೀಯ ಠಾಣೆಗೆ ದೂರು ಕೊಟ್ಟಿದ್ದರು. ಆಕೆಯ ಫೋಟೊ ಹಾಗೂ ವಿವರವನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದ ಅಲ್ಲಿನ ಪೊಲೀಸರು, ಪತ್ತೆಗೆ ಸಹಕರಿಸುವಂತೆ ಇತರ ರಾಜ್ಯಗಳ ಪೊಲೀಸರು ಹಾಗೂ ಸಾರ್ವಜನಿಕರನ್ನು ಕೋರಿದ್ದರು ಎನ್ನಲಾಗಿದೆ.

 

 

 

 

Get Latest updates on WhatsApp. Send ‘Add Me’ to 8550851559

Loading...