ಹಿಂದೂಗಳಲ್ಲಿ ಭಯೋತ್ಪಾದಕರಿಲ್ಲವೇ : ನಟ ಕಮಲ ಹಾಸನ್ ವಿವಾದಾತ್ಮಕ ಹೇಳಿಕೆ – News Mirchi

ಹಿಂದೂಗಳಲ್ಲಿ ಭಯೋತ್ಪಾದಕರಿಲ್ಲವೇ : ನಟ ಕಮಲ ಹಾಸನ್ ವಿವಾದಾತ್ಮಕ ಹೇಳಿಕೆ

ಚೆನ್ನೈ: ಇತ್ತೀಚೆಗೆ ನಟ ಕಮಲ ಹಾಸನ್ ಸದಾ ಸುದ್ದಿಯಲ್ಲಿರುತ್ತಾರೆ. ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಲ್ಲಿರೋ ಕಮಲ್ ಹಾಸನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದು, ಹಿಂದೂಗಳಲ್ಲಿ ಭಯೋತ್ಪಾದಕರಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಭಯೋತ್ಪಾದನೆಯೇ ಕೇರಳದಲ್ಲಿನ ಹಿಂಸಾಚಾರಕ್ಕೆ ಕಾರಣ. ಕೋಮುವಾದವನ್ನು ಬಲಪಂಥೀಯ ವರ್ಗ ಹರಡುತ್ತಿದೆ. ತಮಿಳು ಪತ್ರಿಕೆಯಲ್ಲಿ ಕೇರಳದ ಇಂದಿನ ಸ್ಥಿತಿಗೆ ಇದೇ ಕಾರಣ ಎಂದು ಕಮಲ್ ಅಂಕಣ ಬರೆದಿದ್ದಾರೆ.

ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಮಲ್ ಹಾಸನ್ ನೀಡಿರುವ ಈ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳುತ್ತಿದ್ದು, ಆತನೊಬ್ಬ ಭ್ರಷ್ಟ ಎಂದು ವಾಗ್ದಾಳಿ ನಡೆಸಿದ್ದಾರೆ. ಕಮಲ್ ಅಂಕಣಕ್ಕೆ ಕಾಂಗ್ರೆಸ್ ನಿಂದಲೂ ವಿರೋಧ ವ್ಯಕ್ತವಾಗಿದೆ. ಹಿಂದೂ ಭಯೋತ್ಪಾನೆ ಬಗ್ಗೆ ಈವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಸುಮ್ಮನೆ ಹೇಳಿಕೆ ನೀಡೋದು ಸರಿಯಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.

Get Latest updates on WhatsApp. Send ‘Add Me’ to 8550851559

Loading...