ಕೆಲವೇ ದಿನಗಳಲ್ಲಿ ನಡೆಯಲಿದೆ ಕಡ್ಲೆ ಕಾಯಿ ಪರಿಷೆ – News Mirchi

ಕೆಲವೇ ದಿನಗಳಲ್ಲಿ ನಡೆಯಲಿದೆ ಕಡ್ಲೆ ಕಾಯಿ ಪರಿಷೆ

ಬೆಂಗಳೂರು :  ವಿವಿಧ ಭಾಗಗಳಿಂದ ಮತ್ತೆ ಬಸವನಗುಡಿಗೆ ರುಚಿ ರುಚಿಯ ಕಡ್ಲೆಕಾಯಿಗಳು ಆಗಮಿಸಲು ಕೆಲವೇ ದಿನಗಳು ಉಳಿದಿವೆ. ಮುಜರಾಯಿ ಇಲಾಖೆ ಕಾರ್ತೀಕ ಮಾಸದಲ್ಲಿ ಆಯೋಜಿಸುವ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ನವೆಂಬರ್​ 13ರಿಂದ ಪ್ರಾರಂಭವಾಗಲಿದೆ.

16 ಶತಮಾನ ಅಂದರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕಾಲದಿಂದಲೂ ಕಡಲೆಕಾಯಿ ಪರಿಷೆಯನ್ನು ಆಯೋಜಿಸಲಾಗುತ್ತಿದೆ.
ಈಗಾಗಲೇ ಬಸವನ ಗುಡಿ ಹಾಗೂ ದೊಡ್ಡ ಗಣೇಶ್​ನ ದೇವಸ್ಥಾನಕ್ಕೆ ಬಣ್ಣ ಹಚ್ಚುವ ಕಾರ್ಯ ಕೂಡ ಭರದಿಂದ ಸಾಗಿದ್ದು, ಮಳಿಗೆಗಳನ್ನು ನೀಡುವ ಟೆಂಡರ್​ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಜರಾಯಿಆರೋಗ್ಯ ಹಾಗೂ ಪೊಲೀಸ್​ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪರಿಷೆಯ ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಶೀಘ್ರವೇ ಸಭೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

Get Latest updates on WhatsApp. Send ‘Add Me’ to 8550851559

Loading...