ಬೃಹತ್ ನೀರುಗಾಲುವೆಗಳ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಕೆ.ಜೆ. ಜಾರ್ಜ್ – News Mirchi

ಬೃಹತ್ ನೀರುಗಾಲುವೆಗಳ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಕೆ.ಜೆ. ಜಾರ್ಜ್

ಬೆಂಗಳೂರು :  ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರವರು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಬರುವ ಬೃಹತ್ ನೀರುಗಾಲುವೆಗಳ ಕಾಮಗಾರಿಗಳ ಪ್ರಗತಿಯನ್ನು  ಪರಿಶೀಲಿಸಿದರು.

ವಿವಿಧ ವಾರ್ಡ್‌ಗಳಲ್ಲಿನ ನೀರುಗಾಲುವೆಗಳ ಕಾಮಗಾರಿಯನ್ನು ಪರಿಶೀಲಿಸಿದ ಅವರು ಆದಷ್ಟುಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ನೀರುಗಾಲುವೆಗಳ ಕಾಮಗಾರಿ ಸ್ಥಗಿತಗೊಂಡಿದ್ದನ್ನು ಕೆಲವು ವಾರ್ಡ್‌ಗಳಲ್ಲಿ ಖುದ್ದು ಪರಿಶೀಲನೆ ನಡೆಸಿದ ಅವರು ಕಾಮಗಾರಿ ಆರಂಭಿಸುವಂತೆ ಆದೇಶಿಸಿದರು. ಸ್ಥಳೀಯ ಸಾರ್ವಜನಿಕರು  ನೀರುಗಾಲುವೆಗಳ ಅರ್ಧಂಬರ್ಧ ಕಾಮಗಾರಿಗಳಿಂದಾಗಿ ಮಳೆಗಾಲದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿವೆ ಎಂದು ಜಾರ್ಜ್‌ಅವರಲ್ಲಿ ದೂರು ಸಲ್ಲಿಸಿದರು. ಕಾಮಗಾರಿ ನಡೆಸುವ ವೇಳೆ ಅಡ್ಡಾದಿಡ್ಡಿ ಕಲ್ಲುಗಳನ್ನು ಹಾಕಿರುವುದನ್ನು ಕಂಡ ಸಚಿವ ಜಾರ್ಜ್ ಸಾರ್ವಜನಿಕರಿಗೆ ಯಾವುದೇ ಅನಾಹುತಗಳು ಸಂಭವಿಸಿದಂತೆ ಕಾಮಗಾರಿಗಳು ನಡೆಯಬೇಕು ಎಂದು ಸೂಚನೆ ನೀಡಿದರು.

 

 

Get Latest updates on WhatsApp. Send ‘Add Me’ to 8550851559

Loading...