ಮಹಿಳೆಯ ಮಾಂಗಲ್ಯ ಕಸಿದು ಪರಾರಿ – News Mirchi

ಮಹಿಳೆಯ ಮಾಂಗಲ್ಯ ಕಸಿದು ಪರಾರಿ

ಬೆಂಗಳೂರು :  ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ರಂಗೋಲೆ ಹಾಕುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿರುವ  ಘಟನೆ  ಬಾಗಲಗುಂಟೆಯ ಟಿ. ದಾಸರಹಳ್ಳಿ ಬಳಿ ನಡೆದಿದೆ.

ವರಲಕ್ಷ್ಮಮ್ಮ ಎಂಬವರು ದಾಸರಹಳ್ಳಿಯಲ್ಲಿರುವ ತಮ್ಮ  ಮನೆಯ  ಮುಂಭಾಗ  ಬೆಳಗಿನ ವೇಳೆ  ರಂಗೋಲಿ ಹಾಕುತ್ತಿದ್ದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಓರ್ವ ಏಕಾಏಕಿ  ಕತ್ತಿನಲ್ಲಿದ್ದ ಸರ ಕಸಿದಿದ್ದಾನೆ. ವರಲಕ್ಷ್ಮಮ್ಮ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ 90 ಗ್ರಾಂ ತೂಕದ ಸರದಲ್ಲಿ 30 ಗ್ರಾಂ ಉಳಿದಿದ್ದರೆ, 60 ಗ್ರಾಂ ದುಷ್ಕರ್ಮಿಗಳ ಪಾಲಾಗಿದೆ. ಪ್ರಕರಣ ದಾಖಲಿಸಿರುವ ಬಾಗಲಗುಂಟೆ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

 

 

 

Get Latest updates on WhatsApp. Send ‘Add Me’ to 8550851559

Loading...