ಕಮ್ಮನಹಳ್ಳಿಯಲ್ಲಿ ಯುವತಿಗೆ ಕಿರುಕುಳ: ಆರೋಪಿಗಳ ಬಂಧನ

ಹೊಸ ವರ್ಷದ ದಿನದಂದು ಕಮ್ಮನಹಳ್ಳಿಯಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಸೋಮು, ಲಿನೋ, ಅಯ್ಯಪ್ಪ, ರಾಜು ಮತ್ತು ಜೇಮ್ಸ್ ಎಂಬುವವರೇ ಬಂಧಿತ ಆರೋಪಿಗಳು. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದ ಆರೋಪಿಗಳ ಮುಖಚಹರೆ, ವಾಹನ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಟವರ್ ಲೊಕೋಷನ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅರೋಪಿಗಳಿಗೆ ಆ ಯುವತಿಯ ಪರಿಚಯವಿತ್ತು ಎನ್ನಲಾಗುತ್ತಿದ್ದು, ಯುವತಿಯ ಆಟೋವನ್ನು ಬೆನ್ನತ್ತಿ ಪಿಜಿ ಬಳಿ ಹೋಗಲು ಇಳಿದಾಗ, ಅಯ್ಯಪ್ಪ ಎಂಬಾತ ಯುವತಿಯನ್ನು ಚುಂಬಿಸಿ ಅಪಹರಿಸಲು ಪ್ರಯತ್ನಿಸಿದ್ದ.

Loading...

Leave a Reply

Your email address will not be published.

error: Content is protected !!