ಆಂಧ್ರಪ್ರದೇಶ ಅಧಿಕಾರಿಗಳಿಂದ ಇಂದಿರಾ ಕ್ಯಾಂಟೀನ್ ವೀಕ್ಷಣೆ – News Mirchi

ಆಂಧ್ರಪ್ರದೇಶ ಅಧಿಕಾರಿಗಳಿಂದ ಇಂದಿರಾ ಕ್ಯಾಂಟೀನ್ ವೀಕ್ಷಣೆ

ಬೆಂಗಳೂರು :  ಇಂದಿರಾ ಕ್ಯಾಂಟೀನ್ ಯೋಜನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಗೊಂಡಿದ್ದು,  ಆಂಧ್ರಪ್ರದೇಶಕ್ಕೆ ಮಾದರಿಯಾಗಿದೆಯಂತೆ. ಅದಕ್ಕಾಗಿ  ಅಲ್ಲಿನ ಅಧಿಕಾರಿಗಳು ಬಂದು ಇಂದಿರಾ ಕ್ಯಾಂಟೀನ್ ವೀಕ್ಷಣೆ ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್ ಸ್ಥಾಪನೆ ಬಗ್ಗೆ ಆಂಧ್ರಪ್ರದೇಶದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಕನ್ನಬಾಬು ಹಾಗೂ ಅನಂತಪುರಂ, ಕರ್ನೂಲ್, ಚಿತ್ತೂರು ಜಿಲ್ಲೆಗಳ ಪೌರಾಡಳಿತ ಆಯುಕ್ತರು ಮತ್ತು ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದು ಅಧ್ಯಯನ ನಡೆಸಿದರು. ಆಂಧ್ರದ ನಿಯೋಗಕ್ಕೆ  ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್ ಅವರು ಇಂದಿರಾ ಕ್ಯಾಂಟೀನ್, ಅಡುಗೆ ಮನೆಗಳು,  ಆಹಾರ ತಯಾರಿಕೆಗೆ ಬೇಕಾದ ಪರಿಕರಗಳು ಮತ್ತು ಆಹಾರ ಪೂರೈಕೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಕೆಲವು ಕ್ಯಾಂಟೀನ್‌ಗಳಿಗೂ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಸಿಬ್ಬಂದಿ ಸಮವಸ್ತ್ರ, ಆಹಾರ ವಿತರಣೆ, ಕುಡಿಯುವ ನೀರಿನ ಸೌಲಭ್ಯದ ಬಗ್ಗೆಯೂ ಮಾಹಿತಿ ಪಡೆದರು.

2016ರಲ್ಲಿ ಆಂಧ್ರಪ್ರದೇಶ ಸರ್ಕಾರ  ಇಂತಹದ್ದೇ ಮಾದರಿಯಲ್ಲಿ ಕ್ಯಾಂಟೀನ್ ಆರಂಭಿಸುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಜಾರಿ ಆಗಲಿಲ್ಲ. ಈ ಸಂಬಂಧ ಇಂದಿರಾ ಕ್ಯಾಂಟೀನ್‌ನ ಕಾರ್ಯವಿಧಾನದ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನಿಯೋಗ ತಿಳಿಸಿದೆ.

 

 

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!