ಈ ವಾರ ತೆರೆಗೆ ಬರಲಿದೆ ‘ನುಗ್ಗೇಕಾಯಿ’

ಬೆಂಗಳೂರು  :  ಈ ವಾರ ವೇಣುಗೋಪಾಲ್ ನಿರ್ದೇಶನದ  ‘ನುಗ್ಗೇಕಾಯಿ’ ಚಿತ್ರ ತೆರೆಕಾಣಲಿದೆ. ಹಾಸ್ಯ ಪ್ರಧಾನ ಕಥೆ ಇದಾಗಿದೆ ಎಂದು ಶೀರ್ಷಿಕೆಯೇ ಹೇಳುತ್ತದೆ. ಕಥೆ, ಚಿತ್ರಕಥೆ ಪ್ರೀತಂ ಎಸ್‌ ಹೆಗಡೆ ಅವರದ್ದು. ಇಂದಿನ ಯುವ ಪೀಳಿಗೆ  ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ  ಯಾವ ರೀತಿ ಹಾಳಾಗುತ್ತಿದ್ದಾರೆ ಎಂಬುದನ್ನು ಚಿತ್ರ ತೆರೆದಿಡಲಿದೆ.

ಚಿತ್ರ ಪ್ರಮುಖ ಪಾತ್ರಗಳಲ್ಲಿ ಮಧುಸೂದನ್‌, ಎಸ್ತರ್‌ನರೋನಾ, ಕ್ರಿಸ್ಟಿನಾ ಜಾಯ್‌ ಕಾಣಿಸಿಕೊಂಡಿದ್ದಾರೆ. ಸೂರ್ಯಕಾಂತ್‌ ಹೊನ್ನಾಳಿ ಅವರ ಛಾಯಾಗ್ರಹಣವಿದ್ದು,  ಸಾಹಿತ್ಯ ಮತ್ತು ಸಂಗೀತ ಸುರೇಶ್‌ ಬಿ.ಎಸ್‌.ವಿ ಅವರದ್ದು,  ಉದಿತ್‌, ಮುಕುಂದ, ಬ್ಯಾಂಕ್‌ ಜನಾರ್ಧನ್‌, ಬಿರಾದರ್‌, ನಯನಾ, ಜನಿಫ‌ರ್‌ ಆಂಟೋನಿ  ಸೇರಿದಂತೆ ಹಲವು ನಟರು ಚಿತ್ರದಲ್ಲಿ ನಟಿಸಿದ್ದಾರೆ.

 

Get Latest updates on WhatsApp. Send ‘Add Me’ to 8550851559