ಹೊಸ ಗಿನ್ನಿಸ್ ದಾಖಲೆ ಬರೆದ 1.9 ಕಿ.ಮೀ ಉದ್ದದ ಪಿಜ್ಜಾ! |News Mirchi

ಹೊಸ ಗಿನ್ನಿಸ್ ದಾಖಲೆ ಬರೆದ 1.9 ಕಿ.ಮೀ ಉದ್ದದ ಪಿಜ್ಜಾ!

ವಾಷಿಂಗ್ಟನ್: ಅಮೆರಿಕಾದಲ್ಲಿ ತಯಾರಿಸಿದ ಒಂದು ಪಿಜ್ಜಾ ಈ ಹಿಂದಿನ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಮಾಡಿದೆ. ಸುಮಾರು 100 ಜನ ಬಾಣಸಿಗರು ಈ ಪಿಜ್ಜಾ ತಯಾರಿಕೆಯಲ್ಲಿ ತೊಡಗಿದ್ದರು. ಈ ಪಿಜ್ಜಾ ಉದ್ದ ಕೇಳಿದರೆ ಅವಾಕ್ಕಾಗುತ್ತೀರಿ. ಈ ಪಿಜ್ಜಾ ಉದ್ದ ಒಂದೆರಡು ಮೀಟರ್ ಅಲ್ಲವೇ ಅಲ್ಲ.. ಬರೋಬ್ಬರಿ 1,930 ಮೀಟರ್!

ಈ ಹಿಂದೆ ಇಟಲಿ ತಯಾರಿಸದ್ದ ಪಿಜ್ಜಾ ಇದುವರೆಗೂ ವಿಶ್ವದಾಖಲೆಯಾಗಿತ್ತು. ಆ ಪಿಜ್ಜಾ 1,853 ಮೀಟರ್ ಉದ್ದವಿತ್ತು. ಈಗ ಅದಕ್ಕಿಂತಲೂ ಉದ್ದದ ಪಿಜ್ಜಾ ತಯಾರಿಸಿದ ಅಮೆರಿಕಾ ಹೊಸ ದಾಖಲೆ ಮಾಡಿದೆ.

ಪಿಜ್ಜಾಓವೆನ್ ಡಾಟ್ ಕಾಮ್ ಎಂಬ ಅಮೆರಿಕದ ರೆಸ್ಟೋರೆಂಟ್ ಒಂದು ಈ ಪಿಜ್ಜಾವನ್ನು ತಯಾರಿಸಿದೆ. ಇದರಲ್ಲಿ ಸುಮಾರು 3,632 ಕೆಜಿ ಹಾಲಿನ ಪುಡಿ, 1,6434 ಕೆಜಿ ಚೀಜ್, 2,542 ಕೆಜಿ ಸಾಸ್ ಬಳಸಲಾಗಿದೆ. ಒಂದು ಕನ್ವೇಯರ್ ಬೆಲ್ಟ್ ಮೇಲೆ 8 ಗಂಟೆಗಳ ಕಾಲ ಕಷ್ಟಪಟ್ಟು ಬೇಯಿಸಿ ತಯಾರಿಸಿದ್ದಾರೆ.

Loading...
loading...
error: Content is protected !!