ಪೋರ್ಚುಗಲ್ ಭಾರತ ನಡುವೆ 11 ಒಪ್ಪಂದಗಳು – News Mirchi

ಪೋರ್ಚುಗಲ್ ಭಾರತ ನಡುವೆ 11 ಒಪ್ಪಂದಗಳು

ಲಿಸ್ಬನ್: ಮೂರು ದೇಶಗಳ ಪ್ರವಾಸಕ್ಕಾಗಿ ದೆಹಲಿಯಿಂದ ತೆರಳಿದೆ ಪ್ರಧಾನಿ ಮೋದಿ ಶನಿವಾರ ಪೋರ್ಚುಗಲ್ ತಲುಪಿದರು. ಈ ಸಂದರ್ಭದಲ್ಲಿ ಪೋರ್ಚುಗಲ್ ಪ್ರಧಾನಿ ಆಂಟೋನಿಯೋ ಕೋಸ್ಟಾ ಅವರೊಂದಿಗೆ ಬಾಹ್ಯಾಕಾಶ, ವಾತಾವರಣ, ಭಯೋತ್ಪಾದನೆ ವಿರೋಧಿ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ನಂತರ ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು 4 ಮಿಲಿಯನ್ ಯೂರೋಗಳ (ಸುಮಾರು ರೂ.28.8 ಕೋಟಿ) ಜಂಟಿ ನಿಧಿಯನ್ನು ರಚಿಸಬೇಕೆಂದು ತೀರ್ಮಾನಿಸಿದರು.

ಇದರೊಂದಿಗೆ ಉಭಯ ದೇಶಗಳ ನಡುವೆ 11 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪೋರ್ಚುಗಲ್ ಆರ್ಥಿಕ ಅಭಿವೃದ್ಧಿ ಮತ್ತು ಭಾರತದ ಅಭಿವೃದ್ಧಿ ಎರಡೂ ಜತೆಯಾದರೆ ಅದ್ಭುತವಾದ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಮೋದಿ ಹೇಳಿದರು. ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಆಂಟೋನಿಯೋ ಹೇಳಿದ್ದಾರೆ. ಪೋರ್ಚುಗಲ್ ಪ್ರವಾಸ ಮುಗಿಸಿದ ಪ್ರಧಾನಿ, ಶನಿವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು.

Loading...