ಕುಲಭೂಷಣ್ ಗೆ ಗಲ್ಲು ಹಾಕಿದರೆ ಪಾಕಿಸ್ತಾನದಿಂದ ಬಲೂಚಿಸ್ತಾನ ಬೇರ್ಪಡಿಸಿ |News Mirchi

ಕುಲಭೂಷಣ್ ಗೆ ಗಲ್ಲು ಹಾಕಿದರೆ ಪಾಕಿಸ್ತಾನದಿಂದ ಬಲೂಚಿಸ್ತಾನ ಬೇರ್ಪಡಿಸಿ

ನವದೆಹಲಿ: ಕುಲಭೂಷಣ್ ಜಾದವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಯನ್ನು ಪಾಕ್ ಸರ್ಕಾರ ಜಾರಿ ಮಾಡಿದರೆ, ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಬೇರೆ ಮಾಡಿ, ಪ್ರತ್ಯೇಕ ದೇಶವಾಗಿ ಗುರುತಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣ್ಯಸ್ವಾಮಿ ಒತ್ತಾಯಿಸಿದ್ದಾರೆ. ಜಾದವ್ ನಂತರ ಮತ್ತೊಮ್ಮೆ ಪಾಕ್ ಇಂತಹ ಕೃತ್ಯಕ್ಕೆ ಕೈ ಹಾಕಿದರೆ, ಸಿಂಧ್ ಪ್ರದೇಶವನ್ನು ಪಾಕ್ ನಿಂದ ಬೇರ್ಪಡಿಸಬೇಕು ಎಂದು. ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಇದು ಸರಿಯಾದ ದಾರಿ ಎಂದು ಸ್ವಾಮಿ ಹೇಳಿದ್ದಾರೆ.

ಕುಲಭೂಷಣ್ ಕಳೆದ ವರ್ಷ ಮಾರ್ಚ್ 3 ರಂದು ಪಾಕಿಸ್ತಾನ ಬಂಧಿಸಿತ್ತು. ಕುಲಭೂಷಣ್ ಅವರು ಭಾರತದ ಗೂಢಚಾರ ಅಲ್ಲ, ಅವರು ಅದಾಗಲೇ ನಿವೃತ್ತಿ ಹೊಂದಿದ್ದರು ಎಂದು ಭಾರತ ಹೇಳಿದ್ದರೂ ಪಾಕ್ ಕಿವಿಗೆ ಹಾಕಿಕೊಂಡಿರಲಿಲ್ಲ. ಕೊನೆಗೆ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾದವ್ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಸುಬ್ರಮಣ್ಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Loading...
loading...
error: Content is protected !!