ಕಂದಕಕ್ಕೆ ಬಸ್ ಉರುಳಿ 11 ಅಮರನಾಥ ಯಾತ್ರಿಗಳ ಸಾವು

ಅಮರನಾಥ ಯಾತ್ರಿಗಳಿದ್ದ ಬಸ್ ಕಂದಕ್ಕೆ ಉರುಳಿ 11 ಜನ ಯಾತ್ರಿಗಳು ಸಾವನ್ನಪ್ಪಿದ ಘಟನೆ ಭಾನುವಾರ ಜಮ್ಮೂ ಕಾಶ್ಮೀರದ ಶ್ರೀನಗರ ಹೆದ್ದಾರಿಯಲ್ಲಿ ನಡೆದಿದೆ. ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ಕೈಗೊಂಡಿದ್ದಾರೆ. ಘಟನೆಯಲ್ಲಿ ಸುಮಾರು 35 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವೇಳಾಪಟ್ಟಿ ಪ್ರಕಾರ ಆಗಸ್ಟ್ 7 ಕ್ಕೆ ಯಾತ್ರೆ ಮುಗಿಯಲಿದೆ. ಈ ವರ್ಷ ಪ್ರತಿ ದಿನ 7,500 ಯಾತ್ರಿಕರಿಗೆ ಅಮರನಾಥ ಯಾತ್ರೆಗೆ ಅವಕಾಶ ನೀಡಲು ಅಧಿಕಾರಿಗಳು ನಿರ್ಧರಿಸಿದ್ದರು.