ಸೌದಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11 ಭಾರತೀಯರ ಸಾವು – News Mirchi

ಸೌದಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11 ಭಾರತೀಯರ ಸಾವು

ಸೌದಿ ಅರೇಬಿಯಾದಲ್ಲಿ ನಡೆದ ಅಗ್ನಿ ದುರಂತದಲ್ಲಿ 11 ಭಾರತೀಯರು ಸಾವನ್ನಪ್ಪಿದ್ದು, 5 ಜನ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಉತ್ತರಪ್ರದೇಶದ ನಾಲ್ವರು, ಮೂವರು ಕೇರಳದವರು, ಬಿಹಾರ ಮತ್ತು ತಮಿಳುನಾಡಿನ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಉಳಿದಿಬ್ಬರು ಯಾವ ರಾಜ್ಯಕ್ಕೆ ಸೇರಿದವರೆಂಬ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.

ಈ ದುರಂತ ನಜ್ರಾನ್ ನಗರದಲ್ಲಿ ನಡೆದಿದ್ದು, ಪಕ್ಕದಲ್ಲೇ ಇದ್ದ ಕಾರಾಗೃಹದಲ್ಲಿ ಕಾಣಿಸಿಕೊಂಡ ಬೆಂಕಿ, ಕಾರ್ಮಿಕರು ವಾಸಿಸುತ್ತಿದ್ದ ಮನೆಗೆ ವ್ಯಾಪಿಸಿದ್ದರಿಂದ ಈ ದುರಂತ ಸಂಭವಿಸಿದೆ. ಕಾರ್ಮಿಕರು ವಾಸಿಸುತ್ತಿದ್ದ ಮನೆಗೆ ಕಿಟಕಿಗಳೂ ಇರದಿದ್ದ ಕಾರಣ ಕಾರ್ಮಿಕರು ಉಸಿರಾಡದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಕಾರಾಗೃಹ ಅಧಿಕಾರಿಗೆ ಲಂಚ ಪ್ರಕರಣ: ಶಶಿಕಲಾ ಸ್ಥಳಾಂತರಕ್ಕೆ ಸಿದ್ಧತೆ?

ಘಟನೆ ಕುರಿತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಗೋಪಾಲ್ ಬಾಗ್ಲೇ ಗುರುವಾರ ನವದೆಹಲಿಯಲ್ಲಿ ವಿವರಿಸಿದರು. ಜೆಡ್ಡಾದಲ್ಲಿನ ಭಾರತೀಯ ರಾಯಭಾರಿ ಕಛೇರಿ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ಅವರು ಹೇಳಿದರು. ಇದೇ ಘಟನೆ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ, ನಜ್ರಾನ್ ಅಗ್ನಿ ಅವಘಡಕ್ಕೆ ಸಂಬಂಧಿಸಿದ ಮಾಹಿತಿ ತಮಗೆ ಲಭಿಸಿದ್ದು, ಜೆಡ್ಡಾದಲ್ಲಿನ ಭಾರತೀಯ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ನಜ್ರಾನ್ ಗವರ್ನರ್ ಜೊತೆ ನಮ್ಮ ದೂತಾವಾಸ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ನನಗೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಗಾಂಧಿ ಮೊಮ್ಮನಿಗೆ ನಿತೀಶ್ ಬೆಂಬಲ

ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರನ್ನು ಗೌರೀಶಂಕರ್ ಗುಪ್ತಾ, ಕಮಪಾಲನ್ ಸತ್ಯನ್, ಬೈಜು ರಾಘವನ್, ಶ್ರೀಜಿತ್ ಕೊಟ್ಟಸ್ಸೇರಿ, ತಬ್ರೇಜ್ ಖಾನ್, ಅತೀಕ್ ಅಹಮದ್, ವಸೀಂ ಅಕ್ರಮ್, ವಕೀಲ್ ಅಹಮದ್, ಪರಾಸ್ ಕುಮಾರ್ ಸುಬೇದಾರ್, ಮಹಮದ್ ವಜೀಂ ಅಜೀಜೂರ್ ರೆಹಮಾನ್ ಎಂದು ಗುರುತಿಸಲಾಗಿದೆ.

Loading...