Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
114 ಪಾಕಿಸ್ತಾನೀಯರಿಗೆ ಭಾರತೀಯ ಪೌರತ್ವ – News Mirchi
ನಂದಲಾಲ್ ಮೆಘಾನಿ ಮತ್ತು ಕುಟುಂಬ ಸದಸ್ಯರು

114 ಪಾಕಿಸ್ತಾನೀಯರಿಗೆ ಭಾರತೀಯ ಪೌರತ್ವ

ಅಹಮದಾಬಾದ್: ಭಾರತ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿಗೆ ಬರುವವರನ್ನೆಲ್ಲಾ ಗೌರವಿಸುತ್ತದೆ. ಎಲ್ಲಿಂದಲೋ ಬಂದು ಇಲ್ಲಿ ಆಶ್ರಯ ಪಡೆದವರೆಷ್ಟೋ ಜನ. ಇಂತಹದ್ದೇ ಮತ್ತೊಂದು ಘಟನೆಯೊಂದು ನಡೆದಿದೆ.

ಪಾಕಿಸ್ತಾನದಿಂದ ಬಂದು ಗುಜರಾತಿನಲ್ಲಿ ನೆಲೆಸಿದ 114 ಜನರಿಗೆ ಭಾರತೀಯ ಪೌರತ್ವ ಲಭಿಸಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಂದಲಾಲ್ ಮೆಘಾನಿ ಕುಟುಂಬ 16 ವರ್ಷಗಳ ಹಿಂದೆ ಗುಜರಾತಿಗೆ ಬಂದು ಇಲ್ಲಿಯೇ ನೆಲೆಸಿತು. ಈ ಸಂದರ್ಭದಲ್ಲಿ ನಂದಲಾಲ್ ಮೆಘಾನಿ ಮಾತನಾಡುತ್ತಾ, ಪಾಕಿಸ್ತಾನದಲ್ಲಿ ಹೆಚ್ಚಿದ ಅಪರಾಧಗಳು, ಭಯೋತ್ಪಾದಕ ದಾಳಿಗಳಿಗೆ ಹೆದರಿ ತನ್ನ ಪತ್ನಿ, ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಶೀಘ್ರದಲ್ಲಿಯೇ ಮಕ್ಕಳಿಗೂ ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ಸದ್ಯ ಮೆಘಾನಿಯವರು ಆಟೋ ಮೊಬೈಲ್ ವ್ಯಾಪಾರ ನಡೆಸುತ್ತಿದ್ದರೆ, ಪುತ್ರ ಮೆಡಿಕಲ್ ಶಾಪ್ ಇಟ್ಟಿದ್ದಾರೆ.

ಮತ್ತೊಬ್ಬ ಪಾಕಿಸ್ತಾನಿ ಕಿಷನ್ ಲಾಲ್ ಅಂದಾನಿ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. 2005 ರಲ್ಲಿ ನಾಲ್ವರು ಪುತ್ರರೊಂದಿಗೆ ಭಾರತಕ್ಕೆ ವಲಸೆ ಬಂದಿದ್ದಾಗಿ ಹೇಳಿದ್ದಾರೆ. ಭಯೋತ್ಪಾದಕ ದಾಳಿಗಳಿಂದ ತಾವಿದ್ದ ಥರ್ಪಾಕರ್ ಪ್ರದೇಶದಲ್ಲಿ ಜೀವನ ನಡೆಸುವುದೇ ಕಷ್ಟವಾಗಿತ್ತು. ಪ್ರತಿದಿನ ಆತಂಕದಲ್ಲಿ ಬದುಕುತ್ತಿದ್ದೆವು. ಆ ಸಮಯದಲ್ಲಿ ಭಾರತಕ್ಕೆ ಬಂದು ನೆಲೆಸಿದ್ದಾಗಿ ಅವರು ಹೇಳಿದರು. ಈಗ ನಾವು ಭಾರತದಲ್ಲಿ ತುಂಬಾ ಸಂತೋಷದಿಂದ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಪೌರತ್ವ ಕಾಯ್ದೆ 1995 ಪ್ರಕಾರ, ಭಾರತೀಯ ಪೌರತ್ವ ಕೋರಿ ಬಂದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿಗಳದ್ದೇ ಅಂತಿಮ ತೀರ್ಮಾನ. ಈ ಸಂದರ್ಭದಲ್ಲಿ ಅಹಮದಾಬಾದ್ ಜಿಲ್ಲಾಧಿಕಾರಿ ಬಳಿಗೆ ಪೌರತ್ವ ಕೋರಿ ನೂರಾರು ಅರ್ಜಿಗಳು ಬಂದವು. ಇವುಗಳನ್ನೆಲ್ಲಾ ಪರಿಶೀಲಿಸಿ, ವಿಚಾರಣೆ ನಡೆಸಿದ ನಂತರ ಜಿಲ್ಲಾಧಿಕಾರಿ ಅವಂತಿಕ ಸಿಂಗ್ 114 ಜನರಿಗೆ ಪೌರತ್ವ ನೀಡಿ ಆದೇಶ ಜಾರಿ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಪಾಕಿಸ್ತಾನ, ಅಫ್ಘನಿಸ್ತಾ, ಬಾಂಗ್ಲಾದೇಶದಿಂದ ಬಂದ 216 ಅರ್ಜಿಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!