12 ಕಾಂಗ್ರೆಸ್ ನಾಯಕರು ಬಿಜೆಪಿ ಟಿಕೆಟ್’ನಿಂದ ಸ್ಪರ್ಧೆ! – News Mirchi

12 ಕಾಂಗ್ರೆಸ್ ನಾಯಕರು ಬಿಜೆಪಿ ಟಿಕೆಟ್’ನಿಂದ ಸ್ಪರ್ಧೆ!

ಗುಜರಾತ್ ರಾಜ್ಯ ಬಿಜೆಪಿಗೆ ಕಾಂಗ್ರೆಸ್ ನಾಯಕರ ವಲಸೆ ಹೆಚ್ಚಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 12 ಬಂಡಾಯ ನಾಯಕರು ಬಿಜೆಪಿ ಟಿಕೆಟ್ ಪಡೆದ ಸ್ಪರ್ಧಿಸಲಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 12 ಕಾಂಗ್ರೆಸ್ ಬಂಡಾಯ ನಾಯಕರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್ ಮಾಜಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಅವರ ಓಟ್ ಬ್ಯಾಂಕ್ ಸೆಳೆಯಲು ಕಮಲ ನಾಯಕರು ತಂತ್ರ ರೂಪಿಸಿದ್ದಾರೆ. ಇದರ ಜೊತೆಗೆ ಪಟೇಲ್ ಅನಾಮತ್ ಆಂದೋಲನ್ ಸಮಿತಿಯ ಹಾರ್ಧಿಕ್ ಪಟೇಲ್ ಆಪ್ತ ನಾಯಕರಿಬ್ಬರು ಬಿಜೆಪಿ ಕಡೆ ವಾಲಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...