ಕಾಂಗ್ರೆಸ್ ಕೈ ಹಿಡಿದ ಮತದಾರ, ಬಿಜೆಪಿಗೆ ಮುಖಭಂಗ – News Mirchi

ಕಾಂಗ್ರೆಸ್ ಕೈ ಹಿಡಿದ ಮತದಾರ, ಬಿಜೆಪಿಗೆ ಮುಖಭಂಗ

ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡರಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದು ಬಿಂಬಿತವಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಪ್ರತಿಷ್ಟೆಯಾಗಿ ಪರಿಗಣಿಸಿದ್ದರು.

ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ 21,334 ಮತಗಳಿಂದ ಜಯಗಳಿಸಿದ್ದಾರೆ. ಗುಂಡ್ಲುಪೇಟೆಯಿಂದ ಕಾಂಗ್ರೆಸ್ ನ ಗೀತಾ ಮಹದೇವ ಪ್ರಸಾದ್ ಬಿಜೆಪಿ ಅಭ್ಯರ್ಥಿ ವಿರುದ್ಧ 10,887 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Loading...