ಯೋಧರೊಂದಿಗೆ ಅನುಚಿತವಾಗಿ ವರ್ತಿಸಿದವರ ಮೇಲೆ ಎಫ್ಐಆರ್ – News Mirchi

ಯೋಧರೊಂದಿಗೆ ಅನುಚಿತವಾಗಿ ವರ್ತಿಸಿದವರ ಮೇಲೆ ಎಫ್ಐಆರ್

ಏಪ್ರಿಲ್ 9 ರಂದು ಶ್ರೀನಗರ ಲೋಕಸಭಾ ಉಪಚುನಾವಣೆ ವೇಳೆ ಕರ್ತವ್ಯನಿರತರಾಗಿದ್ದ ಯೋಧನರ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ ಯುವಕರ ವಿರುದ್ಧ ಸಿಆರ್‌ಪಿಎಫ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಯೋಧರ ಮೇಲೆ ಹಲ್ಲೆ ನಡೆಸಿದ ಯುವಕರ ವಿರುದ್ಧ ಕಠಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. [ ಯೋಧರ ಮೇಲೆ ಕಲ್ಲೆಸೆತ, ಭದ್ರತಾ ಪಡೆಗಳ ಗುಂಡಿಗೆ ಇಬ್ಬರ ಸಾವು ]

ಯೋಧರ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ ವೀಡಿಯೋ ಪರಿಶೀಲಿಸಿದ್ದೇವೆ, ಈ ಘಟನೆ ಚಡೂರಾ ವಿಧಾನಸಭಾ ಕ್ಷೇತ್ರದ ಕ್ರಾಲ್ಪೊರಾ ಪ್ರದೇಶದಲ್ಲಿ ನಡೆದಿದ್ದು, ನಾವು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲಾ ಕಲೆ ಹಾಕಿ ಚಡೂರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ. ಈ ದುಷ್ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ಕಾನೂನು ಪ್ರಕಾರ ಮುಂದುವರೆಯುತ್ತೇವೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿ ರವಿದೀಪ್ ಸಿಂಗ್ ಸಾಹಿ ಹೇಳಿದ್ದಾರೆ.

Loading...