ಮುಜರಾಯಿ ದೇಗುಲಗಳ ಹಣ ಅನ್ಯ ಧರ್ಮಕ್ಕಿಲ್ಲ |News Mirchi

ಮುಜರಾಯಿ ದೇಗುಲಗಳ ಹಣ ಅನ್ಯ ಧರ್ಮಕ್ಕಿಲ್ಲ

ಬೆಂಗಳೂರು: ಮುಜರಾಯಿ ದೇವಸ್ಥಾನಗಳಿಂದ ಬರುವ ಆದಾಯವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದ್ದಾರೆ.

ಮುಜರಾಯಿ ಇಲಾಖೆಗೆಳಿಗೆ ಹೆಚ್ಚು ಆದಾಯ ತರುವ ದೊಡ್ಡ ದೇವಸ್ಥಾನಗಳಿಂದ ಬರುವ ಹಣದಲ್ಲಿ ಶೇ.60 ರಷ್ಟು ಹಣವನ್ನು ಆಯಾ ದೇವಸ್ಥಾನಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಉಳಿದ ಹಣವನ್ನು ಸಣ್ಣ ದೇವಸ್ಥಾನಗಳು ಮತ್ತು ಶಾಲೆಗಳು, ಆಸ್ಪತ್ರೆ ಮತ್ತು ಭಕ್ತಾದಿಗಳಿಗೆ ಸೌಲಭ್ಯಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಹೆಚ್ಚು ಆದಾಯವಿರುವ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಗೋಶಾಲೆ ನಡೆಸಲು ಅವಕಾಶ ಕೊಡಲಾಗಿದೆ ಎಂದು ಮೇಲ್ಮನೆಯಲ್ಲಿ ಎದುರಾದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

  • No items.

ಹಿಂದೂ ದೇವಾಲಯಗಳ ಹಣವನ್ನು ಚರ್ಚ್ ಮತ್ತು ಮಸೀದಿಗಳಿಗೆ ಬಳಸಲಾಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದ್ದು, ಅಂತಹ ವದಂತಿಗೆ ಯಾರು ಕಿವಿಗೊಡಬಾರದು ಎಂದು ಸಚಿವರು ಮನವಿ ಮಾಡಿದರು.

Loading...
loading...
error: Content is protected !!