ಶಶಿಕಲಾಳನ್ನು ಮರೆತೇ ಬಿಟ್ಟರಾ ಪಕ್ಷದ ನಾಯಕರು?

ಜಯಲಲಿತ ನಿಧನದ ನಂತರ ಚಿನ್ನಮ್ಮ ಶಶಿಕಲಾ ಜಪ ಮಾಡುತ್ತಿದ್ದ ಅಣ್ಣಾಡಿಎಂಕೆ ನಾಯಕರು, ಕ್ರಮೇಣ ಆಕೆಯನ್ನು ಮರೆತೇ ಹೋಗುತ್ತಿದ್ದಾರೆ. ಶಿಶಕಲಾ ಜೈಲಿಗೆ ಹೋದ ಆರಂಭದ ದಿನಗಳಲ್ಲಿ ಸದಾ ಅಲ್ಲಿಗೆ ಹೋಗಿ ಭೇಟಿ ನೀಡುತ್ತಿದ್ದ ನಾಯಕರು ಈಗ ಅತ್ತ ತಲೆಯೂ ಹಾಕುತ್ತಿಲ್ಲ. ಜೈಲಿನಲ್ಲಿರುವ ತನ್ನನ್ನು ಕಾಣಲು ಬರುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ತೀವ್ರ ಆಕ್ರೋಷಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪಳನಿಸ್ವಾಮಿ ಶಶಿಕಲಾರನ್ನು ನೋಡಲು ಮುಂದಾಗಿದ್ದರಾದರೂ, ಈಗಲೇ ಬರುವುದು ಬೇಡ ಎಂದು ಆಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ಮೂಲಕ ಸೂಚಿಸಿದ್ದರು. ಆಗ ಶಶಿಕಲಾ ಭೇಟಿಯನ್ನು ರದ್ದುಮಾಡಿಕೊಂಡ ಪಳನಿಸ್ವಾಮಿ, ನಂತರ ಆ ವಿಷಯವನ್ನೇ ಮರೆತುಬಿಟ್ಟಿದ್ದಾರೆ. ಅವರೊಬ್ಬರೇ ಅಲ್ಲ ಇತರೆ ಸಚಿವರು, ನಾಯಕರು ಕೂಡಾ ಆಕೆಯನ್ನು ಮರೆತುಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Loading...

Leave a Reply

Your email address will not be published.

error: Content is protected !!