ಅನರ್ಹಗೊಂಡ 18 ಶಾಸಕರು, ದಿನಕರನ್ ಬಣಕ್ಕೆ ಬಹುದೊಡ್ಡ ಶಾಕ್ – News Mirchi

ಅನರ್ಹಗೊಂಡ 18 ಶಾಸಕರು, ದಿನಕರನ್ ಬಣಕ್ಕೆ ಬಹುದೊಡ್ಡ ಶಾಕ್

ತಮಿಳುನಾಡು ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಪಳನಿಸ್ವಾಮಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ದಿನಕರನ್ ಬಣಕ್ಕೆ ಈ ಬೆಳವಣಿಗೆ ಭಾರೀ ಆಘಾತ ತಂದಿದೆ. ತಮಿಳುನಾಡು ವಿಧಾನಸಭೆಯಲ್ಲಿ ಬಲ ಪರೀಕ್ಷೆ ವಿಷಯದಲ್ಲಿ ರಾಜ್ಯಪಾಲರ ತೀರ್ಮಾನ ಏನಾಗಬಹುದು ಎಂದು ನಿರೀಕ್ಷಿಸುತ್ತಿರುವ ನಡುವೆಯೇ, ದಿನಕರನ್ ಬಣಕ್ಕೆ ಸ್ಪೀಕರ್ ದೊಡ್ಡ ಶಾಕ್ ನೀಡಿದ್ದಾರೆ. ದಿನಕರನ್ ಬಣದ 18 ಶಾಸಕರನ್ನು ಸ್ಪೀಕರ್ ಇಂದಿನಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದಾರೆ.

ತಮಿಳುನಾಡಿನ ತಾತ್ಕಾಲಿಕ ಗವರ್ನರ್ ವಿದ್ಯಾಸಾಗರ್ ರಾವ್ ಇಂದು ಚೆನ್ನೈಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಧನಪಾಲ್ ಅವರ ತೀರ್ಮಾನ ಚರ್ಚೆಗೆ ಕಾರಣವಾಗಿದೆ.

ದಿನಕರನ್ ಗುಂಪಿನ ಶಾಸಕರು ಸ್ಪೀಕರ್ ಧನಪಾಲ್ ಅವರ ನಿರ್ಧಾರವನ್ನು ವಿರೋಧಿಸಿದ್ದಾರೆ. ನಮ್ಮನ್ನು ಅನರ್ಹಗೊಳಿಸಿರುವುದು ಅನ್ಯಾಯವಾಗಿದ್ದು, ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಿದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ ಎಂಬ ಕಾರಣಕ್ಕೆ ಪಳನಿಸ್ವಾಮಿ ಸರ್ಕಾರ ತಮ್ಮನ್ನು ಅನರ್ಹಗೊಳಿಸುವಂತೆ ಮಾಡಿದೆ ಎಂದು ದಿನಕರನ್ ಬಣದ ಶಾಸಕರು ಆರೋಪಿಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...