ಪಾಕ್‌ನಲ್ಲಿ ನಾಪತ್ತೆಯಾಗಿದ್ದ ಮುಸ್ಲಿಂ ಧರ್ಮಗುರುಗಳು ನಾಳೆ ಭಾರತಕ್ಕೆ ವಾಪಸ್

ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ಮುಸ್ಲಿಂ ಧರ್ಮಗುರುಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು ಅವರಿಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸೋಮವಾರ ಇಬ್ಬರೂ ಧರ್ಮಗುರುಗಳು ಸೋಮವಾರ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 13 ರಂದು ಲಾಹೋರಿನಿಂದ ಕರಾಚಿಗೆ ತೆರಳಲು ವಿಮಾನ ನಿಲ್ದಾಣದಲ್ಲಿದ್ದಾಗ ಪಾಕ್ ಗುಪ್ತಚರ ಸಂಸ್ಥೆ ಭಾರತೀಯ ಮುಸ್ಲಿಂ ಧರ್ಮಗುರುಗಳನ್ನು ವಶಕ್ಕೆ ಪಡೆದಿತ್ತು ಎನ್ನಲಾಗುತ್ತಿತ್ತು. ಆದರೆ ಧರ್ಮಗುರುಗಳು ಇದ್ದ ಜಾಗದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ ಸಂಬಂಧಿಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

Loading...

Leave a Reply

Your email address will not be published.

error: Content is protected !!