1993 ಮುಂಬೈ ಸ್ಪೋಟ, ಅಬು ಸಲೇಂ ಸೇರಿದಂತೆ 6 ಜನರು ತಪ್ಪಿಸ್ಥತರು |News Mirchi

1993 ಮುಂಬೈ ಸ್ಪೋಟ, ಅಬು ಸಲೇಂ ಸೇರಿದಂತೆ 6 ಜನರು ತಪ್ಪಿಸ್ಥತರು

1993 ಮುಂಬೈ ಸ್ಪೋಟಗಳ ಪ್ರಕರಣಗಳ ಸೂತ್ರಧಾರ ಮುಸ್ತಫಾ ದೋಸಾ, ಗ್ಯಾಂಗ್’ಸ್ಟರ್ ಅಬೂ ಸಲೇಂ ಸೇರಿದಂತೆ ಆರು ಜನರನ್ನು ಟಾಡಾ ವಿಶೇಷ ನ್ಯಾಯಾಲಯ ಶುಕ್ರವಾರ ಅಪರಾಧಿಗಳೆಂದು ತೀರ್ಪು ನೀಡಿದೆ. ಅಬ್ದುಲ್ ಖಯ್ಯೂಂ ಎನ್ನುವ ಮತ್ತೊಬ್ಬ ಆರೋಪಿಯನ್ನು ಸೂಕ್ತ ಆಧಾರಗಳಿಲ್ಲವೆಂದು ನಿರಪರಾಧಿಯೆಂದು ಘೋಷಿಸಿದೆ. 24 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಇವರಿಗೆ ವಿಧಿಸಬೇಕಿರುವ ಶಿಕ್ಷೆಯ ಕುರಿತ ವಾದ ಸೋಮವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ.

ರಿಯಾಜ್ ಸಿದ್ದಕಿ ಹೊರತು ಪಡಿಸಿ, ಅಬುಸಲೇಂ, ಮುಸ್ತಫಾ, ಕರೀಮುಲ್ಲಾ ಖಾನ್, ಫಿರೋಜ್, ಅಬ್ದುಲ್ ರಷೀದ್ ಖಾನ್, ತಾಹಿರ್ ಮರ್ಚ್ಟಂಟ್ ರನ್ನು ಅಪರಾಧ ಪಿತೂರಿ, ಭಾರತೀಯ ದಂಡ ಸಂಹಿತೆ, ಟಾಡಾ ಕಾಯ್ದೆಯಡಿಯಲ್ಲಿ ಕೊಲೆ ಸೇರಿದಂತೆ ಹಲವು ಪ್ರಕರಣಗಳು, ಸ್ಪೋಟಗ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ಹೊಂದಿರುವುದು, ಸಾರ್ವಜನಿಕರ ಆಸ್ತಿ ನಾಶ ಮುಂತಾದ ಪ್ರಕರಣಗಳಲ್ಲಿ ಅಪರಾಧಿಗಳೆಂದು ಘೋಷಿಸಿದ್ದಾರೆ. ಸಿದ್ದಿಕಿಗೆ ಮಾತ್ರ ಅಬುಸಲೇಂ ಮತ್ತಿತರಿಗೆ ಶಸ್ತ್ರಾಸ್ತ್ರಗಳು ಸರಬರಾಜು ಮಾಡಲು ಸಹಕರಿಸಿದ ಅಪರಾಧದಲ್ಲಿ ಟಾಡಾ ಕಾಯ್ದೆಯಡಿ ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಇವರೆಲ್ಲಾ ಮೊದಲ ಸುತ್ತಿನ ವಿಚಾರಣೆಯ ಅಂತ್ಯದ ಸಮಯದಲ್ಲಿ ಬಂಧಿತರಾದ್ದರಿಂದ ಇವರ ವಿಚಾರಣೆಯನ್ನು ಪ್ರಮುಖ ಪ್ರಕರಣದಿಂದ ಬೇರೆ ಮಾಡಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದೆ.

24 ವರ್ಷಗಳ ಹಿಂದೆ 257 ಜನರನ್ನು ಬಲಿ ತೆಗೆದುಕೊಂಡಿದ್ದ ಈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಯ ಭಾಗವಾಗಿ ಟಾಡಾ ಕೋರ್ಟ್ ಈ ತೀರ್ಪು ನೀಡಿದೆ. 2007 ರ ಮೊದಲ ಸುತ್ತಿನ ವಿಚಾರಣೆಯಲ್ಲಿ ಕೋರ್ಟ್ 100 ಜನರನ್ನು ತಪ್ಪಿತಸ್ಥರು ಎಂದು ಪ್ರಕಟಿಸಿ, 23 ಜನರನ್ನು ದೋಷಮುಕ್ತಗೊಳಿಸಿತ್ತು. 750 ಜನ ಪ್ರಾಸಿಕ್ಯೂಷನ್ ಸಾಕ್ಷಿಗಳು, 50 ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ಸಿಬಿಐ ವಿಚಾರಣೆಯಲ್ಲಿ ಸಲೇಂ ಸೇರಿದಂತೆ ನಾಲ್ವರು ತಮ್ಮ ಅಪರಾಧವನ್ನು ಅಂಗೀಕರಿಸಿದ್ದರು. ಬಾಬ್ರಿ ಮಸೀದಿ ಧ್ವಂಸ ಘಟನೆಗೆ ಪ್ರತೀಕಾರವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದಲ್ಲಿ ಟೈಗರ್ ಮೆಮನ್, ಯಾಕೂಬ್ ಮೆಮನ್, ಮಹ್ಮದ್ ದೋಸಾ, ಮುಸ್ತಫಾ ದೋಸಾ ಜೊತೆ ಹಲವರು ಈ ದಾಳಿ ನಡೆಸಿದ್ದರು.

ಪ್ರಾಸಿಕ್ಯೂಷನ್ ವಾದದ ಪ್ರಕಾರ ಮುಸ್ತಫಾ, ಟೈಗರ್ ಮೆಮನ್, ಚೋಟಾ ಶಕೀಲ್ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಭಾರತದಿಂದ ದುಬೈ ಮೂಲಕ ಪಾಕಿಸ್ತಾನಕ್ಕೆ ಯುವಕರನ್ನು ಕರೆದೊಯ್ದು ಅವರು ಶಸ್ತಾಸ್ತ್ರ ತರಬೇತಿ ನೀಡಿದ್ದರು. ದಾವೂದ್ ಇಬ್ರಾಹಿಂ, ಚೋಟಾ ಶಕೀಲ್, ಟೈಗರ್ ಮೆಮನ್ ಇನ್ನೂ ತಲೆಮರೆಸಿಕೊಂಡಿದ್ದಾರೆ. ಇವರೆಲ್ಲಾ ಪಾಕಿಸ್ತಾನಲದಲ್ಲಿ ಆಶ್ರಯ ಪಡೆದಿರುವುದಾಗಿ ಭಾವಿಸಲಾಗಿದೆ. ವಿಶ್ವದಲ್ಲಿಯೇ ಆರ್.ಡಿ.ಎಕ್ಸ್ (ಸೈಕ್ಲೋ ಟ್ರೈಮಿಥಿಲಿನ್ ಟ್ರೈನೈಟ್ರಮಿನ್) ಅನ್ನು ಭಾರೀ ಪ್ರಮಾಣದಲ್ಲಿ ಬಳಸಿ ನಡೆಸಿದ ದಾಳಿ ಇದಾಗಿತ್ತು. ಅಂದಿನ ಘಟನೆಯಲ್ಲಿ 27 ಕೋಟಿ ಮೌಲ್ಯದ ಆಸ್ತಿ ನಷ್ಟವುಂಟಾಗಿತ್ತು.

ದಾಳಿಗೆ ಸಂಬಂಧಿಸಿದಂತೆ ಮುಸ್ತಫಾ ದೋಸಾ ಭಾರತಕ್ಕೆ ಆರ್.ಡಿ.ಎಕ್ಸ್ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಇದರೊಂದಿಗೆ ಕೆಲ ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಶಸ್ತ್ರಸ್ತ್ರ ಬಳಸುವುದು ಹೇಗೆ ಎಂಬುದರ ತರಬೇತಿ ಕೊಡಿಸಿದ್ದ. ಶಸ್ತ್ರಸ್ತ್ರಗಳನ್ನು ಗುಜರಾತಿನಿಂದ ಮುಂಬೈ ಸಾಗಿಸಿದ್ದು ಅಬೂ ಸಲೇಂ. ಈ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಶಿಕ್ಷೆ ಪೂರೈಸಿದ ಬಾಲಿವುಡ ನಟ ಸಂಜಯ್ ದತ್ ಕೂಡಾ 1993 ರ ಜನವರಿ 16ರಂದು ಸಲೇಂ ಎಕೆ 56 ಆಯುಧಗಳ ಜೊತೆ 250 ಸುತ್ತು ಗುಂಡುಗಳು, ಕೆಲ ಗ್ರೆನೇಡ್ ಗಳನ್ನು ನೀಡಿದ್ದನು. ಪುನಃ ಜನವರಿ 18 ರಂದು ಸಂಜಯ್ ದತ್ ಮನೆಗೆ ಬಂದ ಸಲೇಂ ತಾನು ನೀಡಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಭಯೋತ್ಪಾದನೆ ತರಬೇತಿ ಶಿಕ್ಷಣ ನೀಡಲು ಯುವಕರನ್ನು ಪತ್ತೆ ಹಚ್ಚಿ ಅವರನ್ನು ಪ್ರಚೋದಿಸುತ್ತಿದ್ದವನು ತಾಹಿರ್ ಮರ್ಚಂಟ್. ಭಾರತದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರ ಸ್ಥಾಪಿಸಲು ದೇಣಿಗೆ ಸಂಗ್ರಹಿಸಿದ್ದ. ಇನ್ನು ಫಿರೋಜ್ ಅಬ್ದುಲ್ ಖಾನ್ ಎಂಬ ಉಗ್ರ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಏಜೆಂಟರೊಂದಿಗೆ ಸಂಪರ್ಕವಿಟ್ಟುಕೊಂಡು ಅವುಗಳನ್ನು ಎಚ್ಚರಿಕೆಯಿಂದ ನಿಗದಿತ ಜಾಗಕ್ಕೆ ತಲುಪಿಸಿದ್ದ. ಇದರೊಂದಿಗೆ ಉಗ್ರ ಕೃತ್ಯಗಳಿಗೆ ಯೋಜನೆ ರೂಪಿಸುವದರಲ್ಲಿಯೂ ಪಾತ್ರವಹಿಸಿದ್ದ. ಕಳೆದ ವರ್ಷದ ಮೇ ತಿಂಗಳಲ್ಲಿ ವಿಚಾರಣೆಯ ಸಂದರ್ಭದಲ್ಲಿ ಶರಣಾಗಲು ಸಿದ್ಧನಾದ.

ಅಬುಸಲೇಂ ಶಸ್ತ್ರಾಸ್ತ್ರಗಳನ್ನು ಸಾಹಿಸಲು ವಾಹನವನ್ನು ಹೊಂದಿಸುವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಪರಾಧಿಗಳಿಗೆ ನೆರವಾಗಿದ್ದಾನೆ ರಿಯಾಜ್ ಸಿದ್ದಿಕಿ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಅಡಗಿಸಿದ್ದ ಶಸ್ತ್ರಾಸ್ತ್ರಗಳು, ಡಿಟೋನೇಟರ್ ಗಳು, ಗ್ರೆನೇಡ್ ಗಳನ್ನು ತಲುಪಿಸಬೇಕಿದ್ದ ವ್ಯಕ್ತಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ ಇವನು ಶಸ್ತ್ರಾಸ್ತ್ರ ತರಬೇತ ಪಡೆದಿದ್ದ.

Loading...
loading...
error: Content is protected !!