ಆರೋಪ ಹೊತ್ತವರಿಂದಲೇ ಜೈಲಿನಲ್ಲಿ ಪರಿಶೀಲನೆ! – News Mirchi

ಆರೋಪ ಹೊತ್ತವರಿಂದಲೇ ಜೈಲಿನಲ್ಲಿ ಪರಿಶೀಲನೆ!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ, ಅಕ್ರಮವಾಗಿ ಗಾಂಜಾ ಸರಬರಾಜಾಗುತ್ತಿದೆ ಎಂದು ಕಾರಾಗೃಹ ಡಿಐಜಿ ರೂಪಾ ಆರೋಪ ಮಾಡಿದ್ದು, ವಿಶೇಷ ಸವಲತ್ತು ನೀಡಲು ಶಿಕ್ಷೆ ಅನುಭವಿಸುತ್ತಿರುವ ಖೈದಿ ಶಶಿಕಲಾಳಿಂದ ಹಿರಿಯ ಅಧಿಕಾರಿಗೆ 2 ಕೋಟಿ ಲಂಚ ನೀಡಿಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ವರದಿ ನೀಡಿದ್ದು ತಿಳಿದದ್ದೇ.

ಈ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆಗೂ ಆದೇಶಿಸಿತ್ತು. ಆದರೆ ಉನ್ನತ ಮಟ್ಟದ ತನಿಖಾ ಸಮಿತಿ ಭೇಟಿ ನೀಡುವ ಮುನ್ನವೇ ಲಂಚ ಪಡೆದ ಆರೋಪ ಹೊತ್ತಿರುವ ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್ ಇಂದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ!

ಶಶಿಕಲಾ ಇರುವ ಕೊಠಡಿ ಮತ್ತು ಬಹುಕೋಟಿ ಛಾಪಾ ಕಾಗದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಬ್ದುಲ್ ಕರೀಂ ತೆಲಗಿ ಕೊಠಡಿಗಳನ್ನು ಪರಿಶೀಲಿಸಿದ ಸತ್ಯನಾರಾಯಣ ರಾವ್, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅಬ್ದುಲ್ ಕರೀಂ ತೆಲಗಿಗೆ ನಾಲ್ವರು ವಿಚಾರಣಾಧೀನ ಖೈದಿಗಳನ್ನು ಸಹಾಯಕರನ್ನಾಗಿ ನೀಡಿದ್ದಾರೆಂದು ರೂಪಾ ಅವರು ವರದಿಯಲ್ಲಿ ಹೇಳಿದ್ದಾರೆ.

Loading...