ಎನ್ಕೌಂಟರ್ ನಲ್ಲಿ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ ಹತ್ಯೆ – News Mirchi

ಎನ್ಕೌಂಟರ್ ನಲ್ಲಿ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಳೆದ ತಿಂಗಳು ಅನಂತ್ ನಾಗ್ ಜಿಲ್ಲೆಯಲ್ಲಿ ಆರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ಲಷ್ಕರ್ ಕಮಾಂಡರ್ ಬಷೀರ್ ಲಷ್ಕರಿ ಸೇರಿದಂತೆ ಇಬ್ಬರು ಲಷ್ಕರ್ ಉಗ್ರರನ್ನು ಭದ್ರತಾ ಪಡೆಗಳು ಇಂದು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿವೆ. ಕಾರ್ಯಚರಣೆ ವೇಳೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.

ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭದ್ರತಾಪಡೆಗಳು ಶನಿವಾರ ಅನಂತನಾಗ್ ಜಿಲ್ಲೆಯ ಬ್ರೆಂಟಿ ಬಾಟ್ಪೊರಾ ಹಳ್ಲಿಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯಚರಣೆ ಆರಂಭಿಸಿದ್ದರು. ಕಾರ್ಯಚರಣೆ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಮುಂದಾದಾಗ ಭದ್ರತಾಪಡೆಗಳು ಉಗ್ರರನ್ನು ಹತ್ಯೆ ಮಾಡಿವೆ.

ಮನೆಯೊಂದನ್ನು ಹೊಕ್ಕಿದ್ದ ಉಗ್ರರು ಅಲ್ಲಿ 17 ಜನರನ್ನು ಒತ್ತೆಯಿಟ್ಟುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಚಾಣಾಕ್ಷತನದಿಂದ ಉಗ್ರರ ಹಿಡಿತದಲ್ಲಿದ್ದ 17 ಜನರನ್ನು ರಕ್ಷಿಸಿದರು. ಆದರೆ ಈ ಕಾರ್ಯಚರಣೆಯಲ್ಲಿ 44 ವರ್ಷದ ಮಹಿಳೆ ತಾಹಿರ್ ಬೇಗಂ ಎಂಬಾಕೆ ಮತ್ತು 21 ವರ್ಷದ ಯುವಕ ಶಾದಾಬ್ ಅಹ್ಮದ್ ಚೋಪನ್ ಸಾವನ್ನಪ್ಪಿದ್ದಾರೆ.

ಉಗ್ರರ ವಿರುದ್ಧ ಎನ್ಕೌಂಟರ್, ಒಬ್ಬ ಮಹಿಳೆ ಸಾವು

ಈ ಕಾರ್ಯಚರಣೆಯಲ್ಲಿ ಹತ್ಯೆಯಾದ ಬಷೀರ್ ಲಷ್ಕರಿ ಎಂಬ ಉಗ್ರ ಲಷ್ಕರೆ ತೊಯ್ಬಾ ಸಂಘಟನೆಯ ಪ್ರಮುಖ ಉಗ್ರ. ಪೊಲಿಸ್ ಅಧಿಕಾರಿ ಫಿರೋಜ್ ದಾರ್ ಸೇರಿದಂತೆ 6 ಜನ ಪೊಲೀಸರನ್ನು ಹತ್ಯೆ ಮಾಡಿದ ಘಟನೆಯ ಪ್ರಮುಖ ಸೂತ್ರಧಾರ ಈ ಬಷೀರ್ ಲಷ್ಕರಿ ಎನ್ನಲಾಗಿದೆ.

 

Loading...