ಉತ್ತರ ಕೊರಿಯಾಗೆ ಬುದ್ದಿ ಕಲಿಸಲು ಅಮೆರಿಕಾ ಸಿದ್ಧತೆ? – News Mirchi

ಉತ್ತರ ಕೊರಿಯಾಗೆ ಬುದ್ದಿ ಕಲಿಸಲು ಅಮೆರಿಕಾ ಸಿದ್ಧತೆ?

ಸಿಯೋಲ್: ನೆರೆಯ ದೇಶಗಳನ್ನು ಪ್ರಚೋದಿಸುತ್ತಾ ಉತ್ತರ ಕೊರಿಯಾ ಇತ್ತೀಚೆಗೆ ನಡೆಸಿದ ಖಂಡಾಂತರ ಕ್ಷಿಪಣಿಯ ಪರೀಕ್ಷೆಯ ನಂತರ ತಕ್ಕ ಪ್ರತ್ಯುತ್ತರ ನೀಡಲು ಅಮೆರಿಕ ಸಿದ್ಧವಾಗುತ್ತಿರುವಂತೆ ಕಾಣುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ಅಮೆರಿಕಾ ಯುದ್ಧ ವಿಮಾನಗಳು ಪ್ರತ್ಯಕ್ಷ ಫೈರ್ ಡ್ರಿಲ್ ನಡೆಸಿದವು. ಇದರ ಭಾಗವಾಗಿ ಉತ್ತರ ಕೊರಿಯಾಗೆ ಅತಿ ಸಮೀಪ ತೆರಳಿದ್ದ ಯುದ್ಧ ವಿಮಾನಗಳು ಕೊರಿಯನ್ ಪೆನಿನ್ಸುಲಾ ಮೇಲೆ ಸುತ್ತುಹಾಕಿದವು. ಅಮೆರಿಕಾ ಮತ್ತು ದಕ್ಷಿಣ ಕೊರಿಯಾಗಳನ್ನು ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ನಡೆಸುತ್ತಿರುವ ಕ್ಷಿಪಣಿ ಪರೀಕ್ಷೆಗಳಿಗೆ ಕಠಿಣ ಉತ್ತರ ನೀಡಲು ಈ ಡ್ರಿಲ್ ನಡೆಸಿದ್ದಾಗಿ ದಕ್ಷಿಣ ಕೊರಿಯಾ ಸೇನೆ ಹೇಳಿದೆ.

ಪೋಪ್, ಅಮೆರಿಕಾ ಅಧ್ಯಕ್ಷರ ನಂತರ ಆ ಸ್ವಾಗತ ಮೋದಿಗೆ ಮಾತ್ರ

ಕಳೆದ ಮಂಗಳವಾರ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿತ್ತು. ಭಾರೀ ಸಾಮರ್ಥವುಳ್ಳ ಈ ಕ್ಷಿಪಣಿ ಪೂರ್ವ ಸಮುದ್ರಲ್ಲಿ ಬಿದ್ದಿತ್ತು. ಈ ಕ್ಷಿಪಣಿಗೆ ಅಮೆರಿಕದ ಅಲಾಸ್ಕಾವನ್ನು ತಲುಪುವ ಸಾಮರ್ಥ್ಯವಿದೆ ಎಂದು ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮ ಹೇಳಿತ್ತು. ಇದಕ್ಕೆ ಅಮೆರಿಕಾ ಆಕ್ರೊಶಗೊಂಡಿತ್ತು.

ಈ ಯಂತ್ರವೊಂದಿದ್ದರೆ, ಯಾವ ನೀರನ್ನಾದರೂ ಕುಡಿದುಬಿಡಬಹುದು

Loading...