ಪಾಕ್ ಪ್ರಧಾನಿ ಸಹೋದರನ ಮನೆ ಸಮೀಪ ಆತ್ಮಹತ್ಯಾ ಬಾಂಬ್ ದಾಳಿ, 20 ಜನರ ಸಾವು – News Mirchi

ಪಾಕ್ ಪ್ರಧಾನಿ ಸಹೋದರನ ಮನೆ ಸಮೀಪ ಆತ್ಮಹತ್ಯಾ ಬಾಂಬ್ ದಾಳಿ, 20 ಜನರ ಸಾವು

ಭಾರತದೊಳಗೆ ಉಗ್ರರ ನುಸುಳುವಿಕೆಗೆ ನೆರವು ನೀಡುವ ಪಾಕಿಸ್ತಾನದಲ್ಲಿಯೇ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 20 ಜನ ಸಾವನ್ನಪ್ಪಿದ್ದಾರೆ. ಪ್ರಧಾನಿ ನವಾಜ್ ಷರೀಫ್ ಸಹೋದರ ಮನೆಯ ಸಮೀಪವೇ ಉಗ್ರರ ದಾಳಿ ನಡೆದಿದ್ದು, ದಾಳಿಯಲ್ಲಿ ಪೊಲೀಸರು ಸೇರಿದಂತೆ ಸುಮಾರು 20 ಜನ ಸಾವನ್ನಪ್ಪಿದ್ದು, ಸುಮಾರು 35 ಜನ ಗಾಯಗೊಂಡಿದ್ದಾರೆ.

ಪಾಕ್ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯೂ ಆಗಿರುವ ಶಹಬಾಜ್ ಷರೀಫ್ ಅವರ ಮನೆಯಿಂದ 100 ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ಪೊಲೀಸರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.

ಟೆರರ್ ಫಂಡಿಂಗ್: 7 ಕಾಶ್ಮೀರ ಪ್ರತ್ಯೇಕತಾವಾದಿಗಳ ಬಂಧನ

ಶಹಬಾಜ್ ಷರೀಫ್ ನಿವಾಸದ ಸಮೀಪದಲ್ಲಿದ್ದ ಆರ್ಫಾ ಕರೀಂ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ನಲ್ಲಿ ಜನಜಂಗುಳಿಯಿಂದ ತುಂಬಿದ್ದ ಮಾರುಕಟ್ಟೆಯಲ್ಲಿ ಈ ಸ್ಪೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಹೊತ್ತುಕೊಂಡಿದೆ.

Contact for any Electrical Works across Bengaluru

Loading...
error: Content is protected !!