News in Whatsapp

ಸಿರಿಯಾ ಸೇನೆಯ ದಾಳಿಯಲ್ಲಿ 200ಕ್ಕೂ ಹೆಚ್ಚು ನಾಗರಿಕರ ಸಾವು

ಕೆಲವು ವರ್ಷಗಳಿಂದ ಭಯೋತ್ಪಾದಕ ಸಂಘಟನೆಗಳ ವಶದಲ್ಲಿದ್ದ ಪೂರ್ವ ಗೌಟಾ ಪ್ರದೇಶವನ್ನು ಪುನಃ ವಶಪಡಿಸಿಕೊಳ್ಳಲು ಮುಂದಾಗಿರುವ ಸಿರಿಯಾ ಸೇನೆ ಆ ಭಾಗದಲ್ಲಿ ಹಲವು ದಾಳಿಗಳನ್ನು ನಡೆಸಿದೆ. ಭಾನುವಾರ ಮತ್ತು ಸೋಮವಾರಗಳಂದು ಬಾಂಬ್ ಸುರಿಮಳೆಗೈದಿದೆ. ಇದರಿಂದಾಗಿ ಅಂದಾಜು 200 ಜನ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತಪಟ್ಟವರಲ್ಲಿ 57 ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆಯೊಂದು ಈ ಕುರಿತ ವಿವರಗಳನ್ನು ಪ್ರಕಟಿಸಿದೆ.

ಸೋಮವಾರ ನಡೆದ ದಾಳಿಯಲ್ಲಿಯೇ 127 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ನೂರಾರು ಗಾಯಾಳುಗಳಿಗೆ ಸಾಕಾಗುವಷ್ಟು ಹಾಸಿಗೆಗಳು ಸಿಗದ ಕಾರಣ ಗಾಯಾಳುಗಳಿಗೆ ಚಿಕಿತ್ಸೆ ನೀಡಲೂ ಕಷ್ಟವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಡಮಾಸ್ಕಸ್ ಹೊರವಲಯದಲ್ಲಿ 2015 ರ ನಂತರ ನಡೆದ ಅತಿ ದೊಡ್ಡ ದಾಳಿ ಇದಾಗಿದೆ ಮಾನವ ಹಕ್ಕುಗಳ ಪರಿಶೀಲನಾ ಸಂಸ್ಥೆ ಮುಖ್ಯಸ್ಥ ಅಬ್ದೆಲ್ ರೆಹಮಾನ್ ಹೇಳಿದ್ದಾರೆ. ಗೌಟಾದಲ್ಲಿ ಸದ್ಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ. ಸುಮಾರು ನಾಲ್ಕು ಲಕ್ಷ ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಮತ್ತೊಮ್ಮೆ ದೊಡ್ಡ ಪ್ರಮಾಣದ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಅಲ್-ವತ್ನ ಪತ್ರಿಕೆ ಹೇಳಿದೆ.

ಫೆಬ್ರವರಿ 25 ರಂದು ಎಂ.ಸಿ.ಸುಧಾಕರ್ ಅವರ ಬೃಹತ್ ಸ್ವಾಭಿಮಾನಿ ಸಮಾವೇಶ

ಉತ್ತರ ಗೌಟಾ ಪ್ರದೇದ 2012 ರಿಂದ ಎರಡು ಭಯೋತ್ಪಾದಕ ಸಂಘಟನೆಗಳ ವಶದಲ್ಲಿದೆ. ಡಮಾಸ್ಕಸ್ ಹೊರವಲಯದಲ್ಲಿರುವ ಈ ಪ್ರದೇಶವನ್ನು ಪುನಃ ವಶಪಡಿಸಿಕೊಳ್ಳಲು ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸದ್ ಸೇನೆಯನ್ನು ಕಳುಹಿಸಿದ್ದರು. ಹೀಗಾಗಿ ಕೆಲವ ನಗರಗಳ ಮೇಲೆ ಸೇನೆ ವಿಮಾನಗಳನ್ನು ಬಳಸಿ ದಾಳಿ ನಡೆಸಿತು.

ಕಳೆದ ತಿಂಗಳಾರಂಭದಲ್ಲಿಯೂ ಸರ್ಕಾರಿ ಪಡೆಗಲೂ ಉಗ್ರರ ವಿರುದ್ಧ ಐದು ದಿನಗಳ ನಡೆಸಿದ ದಾಳಿಯಲ್ಲಿ 250 ನಾಗರಿಕರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು. ಈ ಘಟನೆ ಕುರಿತು ಅಂದು ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆ ನಾಗರಿಕರ ಹತ್ಯೆಗಳನ್ನು ಕೂಡಲೇ ನಿಲ್ಲಿಸುವಂತೆ ಸಿರಿಯಾ ಸರ್ಕಾರಕ್ಕೆ ಮನವಿ ಮಾಡಿತ್ತು.

Get Latest updates on WhatsApp. Send ‘Subscribe’ to 8550851559