_20161107_175308

ಔಷಧಿಗಳ ಬೆಲೆಯಲ್ಲಿ ಶೇ. 60 ರಿಂದ 90 ರಷ್ಟು ಕಡಿತ : ಕೇಂದ್ರ ಸಚಿವ ನಡ್ಡಾ

ಜಬಲ್ಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯಡಿ ಔಷಧಿಗಳ ದರಗಳು ಕಡಿಮೆಯಾಗಲಿವೆ. ಈ ಯೋಜನೆಯಡಿ ಸುಮಾರು 2 ಸಾವಿರ ರೀತಿಯ ಔಷಧಿಗಳ ದರಗಳು ಶೇ. 60 ರಿಂದ 90 ರಷ್ಟು ಕಡಿಮೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ಜಬಲ್ಪುರ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಮೃತ ಯೋಜನೆ ಜಾರಿಗೆ ತರುತ್ತಿರುವುದಾಗಿ ಹೇಳಿದರು.

Related Post

error: Content is protected !!