ಗೋಧ್ರಾ ಹತ್ಯಾಕಾಂಡ: 11 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಪರಿವರ್ತನೆ – News Mirchi

ಗೋಧ್ರಾ ಹತ್ಯಾಕಾಂಡ: 11 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಪರಿವರ್ತನೆ

2002 ರಲ್ಲಿ ನಡೆದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗುಜರಾತ್ ಹೈಕೋರ್ಟ್ ಇಂದು 11 ಜನರ ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಇತರೆ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರೈಲ್ವೇ ಇಲಾಖೆ ಮತ್ತು ಸರ್ಕಾರ ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಗೋಧ್ರಾದಲ್ಲಿ ರೈಲಿನ ಬೋಗಿ ಸುಟ್ಟ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ರೂ.10 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಅಂದು ನಡೆದ ಆ ಘಟನೆಯಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ 59 ಕರಸೇವಕರು ಸಾವನ್ನಪ್ಪಿದ್ದು, ನಂತರ ಕೋಮುಗಲಭೆಗೆ ಕಾರಣವಾಗಿತ್ತು.

[Also Read: ದೆಹಲಿಯಲ್ಲಿ ಈ ದೀಪಾವಳಿಗೆ ಪಟಾಕಿ ಬಳಕೆಯಿಲ್ಲ]

ಮಾರ್ಚ್ 1, 2011 ರಂದು ಎಸ್.ಐ.ಟಿ ಯ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ 31 ಜನರನ್ನು ತಪ್ಪಿತಸ್ತರು ಎಂದು ತೀರ್ಪು ನೀಡಿ, 63 ಜನರನ್ನು ಖುಲಾಸೆಗೊಳಿಸಿತ್ತು. 11 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಈ ತೀರ್ಪು ಪ್ರಶ್ನಿಸಿ ಅಂದಿನಿಂದ ಗುಜರಾತ್ ಹೈಕೋರ್ಟ್ ನಲ್ಲಿ ಹಲವು ಮನವಿಗಳನ್ನು ಸಲ್ಲಿಸಲಾಗಿತ್ತು. 63 ಜನರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರ್ಕಾರವೂ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು.

Get Latest updates on WhatsApp. Send ‘Add Me’ to 8550851559

Loading...