ಸಮಾಧಿಗಳಿಂದ ಶವಗಳನ್ನು ಹೊರತೆಗೆದ ಪ್ರಕರಣ, ತೀಸ್ತಾಗೆ ಸುಪ್ರೀಂ ನಲ್ಲಿ ಹಿನ್ನಡೆ

ಗುಜರಾತ್ ಗಲಭೆಗಳಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಅಕ್ರಮವಾಗಿ ಹೊರಗೆ ತೆಗೆದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಾಗಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಅಲ್ಲಿ ವಿಚಾರಣೆ ಎದುರಿಸಲೇಬೇಕು ಎಂದು ನ್ಯಾಯಪೀಠ ಹೇಳಿದೆ.

2005 ರಲ್ಲಿ ಪಂಚಮಹಲ್ ಜಿಲ್ಲೆಯ ಪೂನಂ ನದಿ ಬಳಿಯ ಪಂದರ್ವಾಡಾ ಸುತ್ತಮುತ್ತಲಿನ ಸ್ಮಶಾನಗಳಿಂದ 2002ರ ಗುಜರಾತ್ ಗಲಭೆಗಳಲ್ಲಿ ಸತ್ತವರ ಶವಗಳನ್ನು ಅಕ್ರಮವಾಗಿ ಸಮಾಧಿ ಅಗೆದು ಹೊರಗೆ ತೆಗೆದ ಪ್ರಕರಣದ ಕುರಿತು ಗುಜರಾತ್ ಹೈಕೋರ್ಟ್ ನಲ್ಲಿ ತೀಸ್ತಾ ಸೆಟಲ್ವಾಡ್ ಮತ್ತು ಆಕೆಯ ಪತಿ ಜಾವೆದ್ ಆನಂದ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೇಲೆ ಆರೋಪ ಪಟ್ಟಿಯೂ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೆಳ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ತಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಜಸ್ಟೀಸ್ ಅರುಣ್ ಮಿಶ್ರಾ, ಅಮಿತನವ್ ರಾರು ಅವರ ನ್ಯಾಯಪೀಠ ಹೇಳಿದೆ. ಕೆಳ ನ್ಯಾಯಾಲಯದಲ್ಲಿಯೇ ವಾದಗಳನ್ನು ಕೇಳಿಸುವಂತೆ ಸೆಟಲ್ವಾಡ್ ಪರ ವಕೀಲ ಕಪಿಲ್ ಸಿಬಲ್ ಗೆ ಕೋರ್ಟ್ ಸೂಚಿಸಿದೆ.

ಇದಕ್ಕೂ ಮುನ್ನ ತನಿಖೆ ನಡೆಸಿದ್ದ ಗುಜರಾತ್ ಸರ್ಕಾರ, ಪಂದರ್ವಾಡಾ ಮತ್ತು ಸುತ್ತಮುತ್ತಲಿನ ಸ್ಮಶಾನಗಳಿಂದ ತೀಸ್ತಾ ಸೆಟಲ್ವಾಡ್ 28 ಮೃತದೇಹಗಳನ್ನು ಅನುಮತಿಯಿಲ್ಲದೆ ಹೊರಗೆ ತೆಗೆಸಿದ್ದರು ಎಂದು ತನ್ನ ಅಫಿಡವಿಟ್ ನಲ್ಲಿ ಹೇಳಿತ್ತು.

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ : 7 ಸಾವು, 19 ಜನರಿಗೆ ಗಾಯ

2011 ರಲ್ಲಿ ಲುನಾವಾಡಾ ಪೊಲೀಸರು ತೀಸ್ತಾ ಸೆಟಲ್ವಾಡ್ ಹೆಸರನ್ನು “ಪರಾರಿಯಲ್ಲಿರುವ ಆರೋಪಿ” ಎಂದು ಎಫ್.ಐ.ಆರ್ ನಲ್ಲಿ ಹೆಸರಿಸಿದ್ದರು. ನಂತರ ಈ ಪ್ರಕರಣದಿಂದ ಬಚಾವಾಗಲು ಸೆಟಲ್ವಾಡ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಆಕೆ ವಿರುದ್ಧದ ಎಫ್.ಐ.ಆರ್ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿತ್ತು.