ತಮಿಳುನಾಡಿಗೆ ಹಿಂದಿನ ಆದೇಶದಂತೆ ನೀರು |News Mirchi

ತಮಿಳುನಾಡಿಗೆ ಹಿಂದಿನ ಆದೇಶದಂತೆ ನೀರು

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಈ ಹಿಂದೆ ನೀಡಿದ್ದ ಪ್ರತಿದಿನ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಆದೇಶ ಮುಂದುವರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಹೇಳಿದೆ.

ಕರ್ನಾಟಕದಲ್ಲಿ ನೀರಿನ ಕೊರತೆಯಿದೆ, ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಅಸಾಧ್ಯ ಎಂದು ಕರ್ನಾಟಕ ಪರ ವಕೀಲ್ ಫಾಲಿ ಎಸ್ ನಾರಿಮನ್ ವಾದ ಮಾಡಿದರು.

ಎರಡೂ ರಾಜ್ಯಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್ ಜುಲೈ 11 ರಿಂದ 15 ದಿನಗಳ ಕಾಲ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ. ಅಲ್ಲಿಯವರೆಗೂ ಈ ಹಿಂದಿನ ಆದೇಶ ಮುಂದುವರೆಯುತ್ತದೆ ಎಂದು ಹೇಳಿದೆ.

Loading...
loading...
error: Content is protected !!